– ನಗ್ನ ಚಿತ್ರ ಕಳುಹಿಸಿ ಕಿರುಕುಳ
– ಶಸ್ತ್ರ ಚಿಕಿತ್ಸೆಯ ಬಳಿ ಹೆಣ್ಣಾಗಿ ಬದಲಾದ ಬಂಗಾರ್ ಪುತ್ರ
ಮುಂಬೈ: ಗಂಡಾಗಿದ್ದ ಬಳಿಕ ಹೆಣ್ಣಾಗಿ ಬದಲಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ (Sanjay Bangar) ಅವರ ಪುತ್ರಿ ಅನಯಾ ಬಂಗಾರ್ (Anaya Bangar) ಹಿರಿಯ ಕ್ರಿಕೆಟ್ ಆಟಗಾರರ ಬಗ್ಗೆ ಶಾಕಿಂಗ್ ಆರೋಪ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅನಯಾ ಹಿರಿಯ ಕ್ರಿಕೆಟಿಗರು ನನಗೆ ನಗ್ನ ಚಿತ್ರವನ್ನು ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್ ಮಾಹಿತಿ ಲೀಕ್ – ಗಂಭೀರ್ ಆಪ್ತ ಸೇರಿ ನಾಲ್ವರು ಕೋಚಿಂಗ್ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ
ನಾನು ಭಾರತದಲ್ಲಿದ್ದಾಗ (India) ನನಗೆ ಆಗುತ್ತಿರುವ ನೋವಿನ ಬಗ್ಗೆ ಓರ್ವ ಆಟಗಾರನ ಬಳಿ ತಿಳಿಸಿದ್ದೆ. ಈ ವೇಳೆ ಆತ ಕಾರಿನಲ್ಲಿ ಹೋಗೋಣ. ನಿನ್ನ ಜೊತೆ ನಾನು ಮಲಗಲು ಬಯಸುತ್ತೇನೆ ಎಂದು ಹೇಳಿದ್ದ ಎಂದು ತಿಳಿಸಿದರು. ಆದರೆ ಅನಯಾ ಆ ಆಟಗಾರನ ಹೆಸರನ್ನು ಬಹಿರಂಗ ಮಾಡಲು ನಿರಾಕರಿಸಿದರು. ಸಂದರ್ಶನದಲ್ಲಿ ಅನಯಾ ಪುಣೆಯ ಯೆಶ್ವಿ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಘಟನೆ ನಡೆದಿತ್ತು ಎಂದು ಸುಳಿವು ನೀಡಿದರು.
ನನ್ನ ತಂದೆ ಒಬ್ಬ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ತರಬೇತುದಾರರಾಗಿ ಪ್ರಸಿದ್ಧಿ ಪಡೆದಿದ್ದ ಕಾರಣ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ಕೆಟ್ಟ ಪುರುಷರ ಪ್ರಾಬಲ್ಯದಿಂದ ತುಂಬಿದೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!
ಬಾಲ್ಯದಲ್ಲಿ ಇದ್ದಾಗಲೇ ತಪ್ಪಾದ ಲಿಂಗದಲ್ಲಿ ಜನಿಸಿದ್ದೀನಾ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ. 8 ಅಥವಾ 9 ವರ್ಷದಲ್ಲಿದ್ದಾಗ ನಾನು ನನ್ನ ತಾಯಿಯ ಕಪಾಟಿನಿಂದ ಬಟ್ಟೆಗಳನ್ನು ಆರಿಸಿ ಧರಿಸುತ್ತಿದ್ದೆ. ನಂತರ, ನಾನು ಕನ್ನಡಿಯಲ್ಲಿ ನೋಡಿಕೊಂಡು, “ನಾನು ಹುಡುಗಿ. ನಾನು ಹುಡುಗಿಯಾಗಲು ಬಯಸುತ್ತೇನೆ ಎಂದು ಹೇಳುತ್ತಿದ್ದೆ” ಎಂದು ತಿಳಿಸಿದರು.
ಗಂಡಾಗಿದ್ದ ವೇಳೆ ಆರ್ಯನ್ ಬಂಗಾರ್ ಹಾರ್ಮೋನ್ ಬದಲಿ ಚಿಕಿತ್ಸೆ ಮತ್ತು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಅನಯಾವಾಗಿ ಬದಲಾಗಿದ್ದಾರೆ. ಹೆಣ್ಣಾಗಿ ಬದಲಾಗುವ ಮೊದಲು ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್ ಮತ್ತು ಸರ್ಫರಾಜ್ ಖಾನ್ ಅವರಂತಹ ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಕ್ರಿಕೆಟ್ ಆಡಿದ್ದರು.
ಅನಯಾ ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಅನಯಾ ಲೀಸೆಸ್ಟರ್‌ಶೈರ್‌ನಲ್ಲಿರುವ ಹಿಂಕ್ಲೆ ಕ್ರಿಕೆಟ್ ಕ್ಲಬ್‌ಗಾಗಿ ಆಡಿದ್ದರು. ನವೆಂಬರ್ 2023 ರಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ಸಮಗ್ರತೆಯನ್ನು ರಕ್ಷಿಸಲು ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳಿಗೆ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಿತ್ತು.