ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಎಡಗೈ ಆಲ್ ರೌಂಡರ್ ಸುರೇಶ್ ರೈನಾ ಪೋಷಕರಿಗಾಗಿ 80 ಲಕ್ಷ ರೂ. ಬೆಲೆ ಬಾಳುವ ಕಾರನ್ನು ಖರೀದಿಸಿ ಗಿಫ್ಟ್ ನೀಡಿದ್ದಾರೆ.
ಮರ್ಸಿಡಿಸ್ ಬೆಂಝ್‍ನ ಜಿಎಲ್‍ಇ 350ಡಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರನ್ನು ಹೆತ್ತವರಿಗೆ ರೈನಾ ಉಡುಗೊರೆಯಾಗಿ ನೀಡಿದ್ದಾರೆ. ಒಟ್ಟು ಬೆಲೆಯ 80% ರಷ್ಟು ಹಣವನ್ನು ಸಾಲ ಮಾಡಿ ಈ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ಉತ್ತರ ಪ್ರದೇಶ ಮೂಲದ ಸುರೇಶ್ ರೈನಾ ಉತ್ತರಾಖಂಡ್ ಡೆಹ್ರಾಡೂನ್ ನಲ್ಲಿ ಖರೀದಿ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ, ನಾನು ನೀಲಿ ಬಣ್ಣದ ಕಾರನ್ನು ಹುಡುಕುತ್ತಿದ್ದೆ. ಈ ಬಣ್ಣದ ಕಾರು ಬೇರೆ ಎಲ್ಲಿಯೂ ಲಭ್ಯವಿಲ್ಲದ ಕಾರಣ ಉತ್ತರಾಖಂಡ್ ನಲ್ಲಿ ಖರೀದಿ ಮಾಡಿದ್ದೇನೆ ಎಂದು ರೈನಾ ಉತ್ತರಿಸಿದ್ದಾರೆ.
Advertisement
ಆದರೆ ಕೆಲ ಮಾಧ್ಯಮಗಳು, ತೆರಿಗೆ ಉಳಿತಾಯ ಮಾಡಲು ಡೆಹ್ರಾಡೂನ್ ನಲ್ಲಿ ರೈನಾ ಕಾರನ್ನು ಖರೀದಿ ಮಡಿದ್ದಾರೆ ಎಂದು ಸುದ್ದಿ ಪ್ರಕಟಿಸಿವೆ.
Advertisement
Advertisement
ಡೆಹ್ರಾಡೂನ್ ಹೆಚ್ಚುವರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅರವಿಂದ್ ಕುಮಾರ್ ಪ್ರತಿಕ್ರಿಯಿಸಿ, 10 ಲಕ್ಷ ರೂ. ಅಧಿಕ ಬೆಲೆಯ ಕಾರಿಗೆ ಉತ್ತರ ಪ್ರದೇಶದಲ್ಲಿ 10% ರಸ್ತೆ ತೆರಿಗೆ ಇದ್ದರೆ, ಉತ್ತರಾಖಂಡ್ ನಲ್ಲಿ 8% ಇದೆ. ಹೀಗಾಗಿ ಬಹಳಷ್ಟು ಮಂದಿ ಐಷಾರಾಮಿ ಕಾರುಗಳನ್ನು ಡೆಹ್ರಾಡೂನ್ ನಿಂದಲೇ ಖರೀದಿಸುತ್ತಾರೆ ಎಂದು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಶೋ ರೂಂ ಮ್ಯಾನೇಜರ್ ರವೀಂದ್ರ ಚೌಹನ್ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯಿಸಿ, ಕಳೆದ 10 ದಿನಗಳಿಂದ ರೈನಾ ಕಾರು ಖರೀದಿ ಬಗ್ಗೆ ಫೋನ್ ಮೂಲಕ ನಮ್ಮನ್ನು ಸಂಪರ್ಕಿಸುತ್ತಿದ್ದರು. ಅಂತಿಮವಾಗಿ ನವೆಂಬರ್ 14 ರಂದು ಕಾರನ್ನು ರೈನಾ ಖರೀದಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶ ರಣಜಿ ತಂಡದಲ್ಲಿ ಆಡುತ್ತಿರುವ ರೈನಾ 223 ಏಕದಿನ ಪಂದ್ಯಗಳನ್ನು ಆಡಿ 5568 ರನ್ ಹೊಡೆದಿದ್ದಾರೆ.
https://youtu.be/76kEsZqBZEE