ಬಾಲಿವುಡ್(Bollywood) ಅಂಗಳದಲ್ಲಿ ಡೇಟಿಂಗ್ ವಿಷ್ಯವಾಗಿ ಸಾರಾ ಆಲಿ ಖಾನ್(Sara Ali Khan) ಮತ್ತು ಶುಭಮನ್ ಗಿಲ್(Shubhaman Gill ಜೋಡಿ ಸದ್ದು ಮಾಡ್ತಿದ್ದಾರೆ. ಕೆಲವು ತಿಂಗಳುಗಳಿಂದ ಈ ಜೋಡಿಯ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಸಾರಾ ಜೊತೆಗಿನ ರಿಲೇಷನ್ಶಿಪ್ ಬಗ್ಗೆ ಕ್ರಿಕೆಟಿಗ ಶುಭಮನ್ ಮೌನ ಮುರಿದಿದ್ದಾರೆ.
Advertisement
ಕ್ರಿಕೆಟಿಗ ಶುಭಮನ್ಗೂ ಸಾರಾ ಮೇಲೆ ಲವ್ವಾಗಿದೆ. ಇಬ್ಬರೂ ಹೋದ ಕಡೆಯೆಲ್ಲ ಒಟ್ಟಾಗಿ ಕಾಣಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಡೇಟಿಂಗ್ ವಿಷ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ತನಗಿಂತ 5 ವರ್ಷ ಕಿರಿಯವನ ಜೊತೆ ಸೈಫ್ ಪುತ್ರಿ ಸಾರಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಷ್ಯ ನಿಜನಾ ಎಂಬುದನ್ನ ಈಗ ಶುಭಮನ್ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಶುಭಮನ್ ಇತ್ತೀಚೆಗೆ ಪಂಜಾಬಿ ಟಿವಿ ಕಾರ್ಯಕ್ರಮದರಲ್ಲಿ ಗೆಸ್ಟ್ ಆಗಿ ಬಂದಿದ್ದರು. ಈ ವೇಳೆ ಬಾಲಿವುಡ್ನಲ್ಲಿ ಅತ್ಯಂತ ಫಿಟ್ ನಟಿ ಯಾರು ಎಂದು ಕೇಳಲಾಗಿತ್ತು. ಅವರು ಸಾರಾ ಎಂದು ಉತ್ತರಿಸಿದ್ದರು. ಬಳಿಕ ನೀವು ಸಾರಾ ಡೇಟಿಂಗ್ ಮಾಡುತ್ತೀದ್ದೀರಾ ಎಂದು ನಿರೂಪಕಿ ಕೇಳಿದ್ದರು. ಅವರು ಬಹುಶಃ ಎಂದು ಹೇಳಿದರು. ಈ ಕಾರ್ಯಕ್ರಮದ ನಿರೂಪಕಿ ಶುಬ್ಮನ್ಗೆ ಸಾರಾ ಅವರ ಬಗ್ಗೆ ಸಂಪೂರ್ಣ ಸತ್ಯವನ್ನು ಹೇಳಿ ಎಂದಿದ್ದಾರೆ. ಇದನ್ನೂ ಓದಿ:ಮೊದಲ ರಾತ್ರಿ ಪತಿಯಿಂದ ಪಡೆದ ಗಿಫ್ಟ್ ಸೀಕ್ರೆಟ್ ಬಿಚ್ಚಿಟ್ರು ʻಜೋಶ್ʼ ನಟಿ ಪೂರ್ಣ
Advertisement
ಇದಕ್ಕೆ ಶುಭಮನ್ ಇರಬಹುದು ಇಲ್ಲದೆ ಇರಬಹುದು ಎಂದು ಹೇಳಿದ್ದಾರೆ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ಈ ಮೂಲಕ ಶುಭಮನ್, ಸಾರಾ ಜೊತೆಗಿನ ಸಂಬಂಧವನ್ನ ಪರೋಕ್ಷವಾಗಿ ಹೌದು ಎಂದು ತಿಳಿಸಿದ್ದಾರೆ.