ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಶುಭಮನ್ ಗಿಲ್- ಸಾರಾ ಅಲಿ ಖಾನ್

Public TV
1 Min Read
sara ali khan

ಬಾಲಿವುಡ್ (Bollywood) ಮತ್ತು ಕ್ರಿಕೆಟ್ ಅಂಗಳದಲ್ಲಿ ಡೇಟಿಂಗ್, ಲವ್ ಅಫೇರ್, ಮದುವೆ, ಡಿವೋರ್ಸ್ ಎಲ್ಲವೂ ಕಾಮನ್. ಇದೀಗ ಬಿಟೌನ್ ಅಡ್ಡಾದಿಂದ ತಾಜಾ ಸಮಾಚಾರವೊಂದು ಹರಿದಾಡುತ್ತಿದೆ. ಕ್ರಿಕೆಟಿಗ ಶುಭಮನ್ ಗಿಲ್- ಸಾರಾ ಲವ್ ಕಹಾನಿ ಸದ್ದು ಮಾಡ್ತಿದೆ.

sara ali khan 1

ಐಪಿಎಲ್ (IPL) ಹಾವಳಿ ಶುರುವಾಗಿದೆ. ಕ್ರಿಕೆಟಿಗ ಶುಭಮನ್ ಗಿಲ್ (Shubaman Gill)  ಸದ್ಯ ಐಪಿಎಲ್ ಪಂದ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಪಂದ್ಯಗಳು ನಡೆಯುತ್ತಿರೋದ್ರಿಂದ ಐಪಿಎಲ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚೆಗೆ ಶುಭಮನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ಅಹಮದಾಬಾದ್‌ನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿತ್ತು. ಹೀಗಾಗಿ ಶುಭಮನ್‌ಗೆ ವಿಶ್ ಮಾಡೋಕೆ ಸಾರಾ ಅಲಿ ಖಾನ್ (Sara Ali Khan) ಅಹಮದಾಬಾದ್‌ಗೆ ಹೋಗಿದ್ದರು ಅನ್ನೋ ಸುದ್ದಿ ಓಡಾಡುತ್ತಿದೆ. ಇದನ್ನೂ ಓದಿ:Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

sara ali khan

ಆ ಪಂದ್ಯದಲ್ಲಿ ಶುಭಮನ್ ಗಿಲ್ ಕೇವಲ 63 ಎಸೆತಗಳಲ್ಲಿ 126 ರನ್ ಗಳಿಸಿದ್ದರು. ಸದ್ಯ ಏರ್‌ಪೋರ್ಟ್ನಲ್ಲಿ ಶುಭಮನ್ ಗಿಲ್ ಅನ್ನು ಸಾರಾ ಅಲಿ ಖಾನ್ ಭೇಟಿ ಮಾಡಿದ್ದಾರೆ ಎನ್ನಲಾದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಏರ್‌ಪೋರ್ಟ್ನಲ್ಲಿ ಅಕ್ಕ-ಪಕ್ಕ ಕುಳಿತು ಮಾತಾಡುತ್ತಿರುವ ಫೋಟೊ ವೈರಲ್ ಆಗಿದೆ.

sara ali khan

ಮೊದಲು ಶುಭಮನ್ ಗಿಲ್ ಹೆಸರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಮ್ಯಾಟರ್ ಬೇರೆ ಕಡೆಗೆ ತಿರುಗಿತ್ತು.

Share This Article