– ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗಿ
ಮಂಗಳೂರು: ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ (Shivam Dube) ಮಂಗಳೂರಿಗೆ (Mangaluru) ಭೇಟಿ ನೀಡಿದ್ದಾರೆ. ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durgaparameshwari Temple) ಭೇಟಿ ನೀಡಿದ ದುಬೆ, ದೇವಿಯ ದರ್ಶನ ಪಡೆದಿದ್ದಾರೆ.
Advertisement
ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವತಿಯಿಂದ ಶಿವಂ ದುಬೆ ಅವರಿಗೆ ದೇವಳದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ದೇವಳದ ಅರ್ಚಕರು, ಆಡಳಿತ ಮಂಡಳಿಯವರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ದುಬೆ ಪಾಲ್ಗೊಂಡರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಈ ಬಾರಿಯೂ ಜನ ಜೆಡಿಎಸ್ ಕೈ ಹಿಡಿಯುತ್ತಾರೆ: ನಿಖಿಲ್ ಕುಮಾರಸ್ವಾಮಿ
Advertisement
Advertisement
ಮಂಗಳೂರಿನಲ್ಲಿ ಹುಲಿವೇಷ ಸ್ಪರ್ಧೆಯ ಅಬ್ಬರ ಜೋರಾಗಿ ನಡೆಯುತ್ತಿದ್ದು, ನಟ ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಸೇರಿದಂತೆ ಅನೇಕ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿ ಮಂಗಳೂರಿನ ವಿವಿಧೆಡೆ ಹುಲಿ ಕುಣಿತ ಸ್ಪರ್ಧೆ ನಡೆಯುತ್ತಿದೆ. ನಗರದ ನೆಹರೂ ಮೈದಾನದಲ್ಲಿ ನಡೆದ ಪಿಲಿಪರ್ಬ ಹುಲಿವೇಷ ಕುಣಿತದ ಸ್ಪರ್ಧೆಗೆ ಅತಿಥಿಯಾಗಿ ಆಗಮಿಸಿದ ಚಿತ್ರನಟ ರಾಜ್ ಬಿ ಶೆಟ್ಟಿ ವೇದಿಕೆಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದರು. ಇದನ್ನೂ ಓದಿ: Mysuru Dasara Photo Gallery: ಜಂಬೂಸವಾರಿ ಮೆರವಣಿಗೆ ವೈಭವ ಕಣ್ತುಂಬಿಕೊಂಡ ಕೋಟ್ಯಂತರ ಜನರು
Advertisement
ಹುಲಿವೇಷಧಾರಿಗಳು ವೇದಿಕೆಯಲ್ಲಿ ಹುಲಿಡ್ಯಾನ್ಸ್ ಮಾಡುತ್ತಿದ್ದಂತೆ ರಾಜ್ ಬಿ ಶೆಟ್ಟಿಯೂ ಅವರೊಂದಿಗೆ ಸ್ಟೆಪ್ ಹಾಕಿ ಎಲ್ಲರನ್ನೂ ರಂಜಿಸಿದರು. ಬಳಿಕ ಇದೇ ವೇದಿಕೆಗೆ ಆಗಮಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಲಿವೇಷ ಹಾಕಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿದರು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಜಯ್ ದತ್ ಭೇಟಿ