‘ಡಿಯರ್ ಸತ್ಯ’ (Dear Sathya) ಸಿನಿಮಾ ಖ್ಯಾತಿಯ ಅರ್ಚನಾ ಕೊಟ್ಟಿಗೆ ಅವರು ಸ್ಟಾರ್ ಕ್ರಿಕೆಟರ್ ಶರತ್ ಬಿ.ಆರ್ (Sharath B.R) ಜೊತೆಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲಿ ಕ್ರಿಕೆಟರ್ ಶರತ್ ಬಿ.ಆರ್ ಮತ್ತು ನಟಿ ಅರ್ಚನಾ (Archana Kottige) ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೇ ಏ.23ರಂದು ಶರತ್ ಜೊತೆ ನಟಿ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ:ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ
ಕಾಲೇಜ್ ಸೀನಿಯರ್ ಆಗಿದ್ದ ಶರತ್‌ರನ್ನು ನಟಿ ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರು ಕೂಡ ಇಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಬಂದ್ರು ಕುಡ್ಲದ ಬೆಡಗಿ- ಸುದೀಪ್ ಸಿನಿಮಾದಲ್ಲಿ ಪೂಜಾ ಹೆಗ್ಡೆ
ಅರ್ಚನಾ ಅವರು ಡಿಯರ್ ಸತ್ಯ, ಎಲ್ರ ಕಾಲೆಳೆಯುತ್ತೆ ಕಾಲ, ಶಬರಿ, ಒಂದು ಅಲಂಕಾರ ವಿದ್ಯಾರ್ಥಿ, ಹೊಂದಿಸಿ ಬರೆಯಿರಿ ಸೇರಿದಂತೆ 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಶರತ್ ಅವರು ಕರ್ನಾಟಕ ಕ್ರಿಕೆಟರ್ ಆಟಗಾರ. ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ನಡೆದ ಉದಯೋನ್ಮುಕ ತಂಡಗಳ ಏಷ್ಯಾ ಕಪ್‌ನಲ್ಲಿ ಅವರು ಭಾರತ ತಂಡದ ನಾಯಕನಾಗಿದ್ದರು. ಕಳೆದ ವರ್ಷದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು.