ಗಾಂಧೀನಗರ: ಗಾಯಾಳುವಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿರುವ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅನ್‍ಫಿಟ್ ಕಾರಣ ಹೇಳಿ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆದರೆ ಅತ್ತ ಗುಜರಾತ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ (Gujarat Election) ಬಿಜೆಪಿ (BJP) ಪರ ಪ್ರಚಾರ ರ್‍ಯಾಲಿಯಲ್ಲಿ ಭಾಗವಹಿಸಿ ಟೀಕೆಗೆ ಗುರಿಯಾಗಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ (Rivaba Jadega) ಅವರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಗುಜರಾತ್‍ನ ಜಾಮ್ನಗರ ಉತ್ತರದಿಂದ (Jamnagar North) ಬಿಜೆಪಿ ಅಭ್ಯರ್ಥಿಯಾಗಿ ರಿವಾಬಾ ಜಡೇಜಾ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಜಡೇಜಾ ಪತ್ನಿ ಪರ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah) ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದು, ಇವರೊಂದಿಗೆ ಜಡೇಜಾ ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್ನಗರ ಉತ್ತರದಿಂದ ಬಿಜೆಪಿ ಟಿಕೆಟ್
ಇದೀಗ ಜಡೇಜಾ ಈ ನಡೆ ಕುರಿತಾಗಿ ಟೀಕೆಗಳು ಕೇಳಿ ಬರುತ್ತಿದೆ. ಟಿ20 ವಿಶ್ವಕಪ್‍ಗೂ (T20 World Cup) ಮುನ್ನ ಏಷ್ಯಾಕಪ್‍ನಲ್ಲಿ (Asia Cup) ಜಡೇಜಾ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಆ ಬಳಿಕ ಗಾಯದಿಂದ ಚೇತರಿಕೆ ಕಂಡಿದ್ದು, ಬಾಂಗ್ಲಾದೇಶ ಸರಣಿಗೆ ತಂಡಕ್ಕೆ ಮೊದಲು ಆಯ್ಕೆಯಾಗಿದ್ದರು. ಆದರೆ ಆ ಬಳಿಕ ದಿಢೀರ್ ಆಗಿ ಜಡೇಜಾ ಅನ್‍ಫಿಟ್ ಎಂದು ತಿಳಿಸಿ ವಿಶ್ರಾಂತಿ ಬಯಸಿದ್ದಾರೆ. ಈ ನಡುವೆ ಪತ್ನಿ ಪರ ಪ್ರಚಾರ ರ್‍ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಜಡೇಜಾಗೆ ದೇಶದ ಪರ ಆಡುವುದಕ್ಕಿಂತ ಪತ್ನಿಯ ಪರ ಪ್ರಚಾರ ಹೆಚ್ಚಾಯಿತೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು
ಗುಜರಾತ್‍ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ (Congress), ಎಎಪಿ (AAP) ಸೇರಿ ಎಲ್ಲಾ ಪಕ್ಷಗಳು ಭರದಿಂದ ಪ್ರಚಾರದಲ್ಲಿ ತೊಡಗಿಕೊಂಡಿವೆ.