ನಟಿ ನತಾಶಾ (Natasa) ಜೊತೆಗಿನ ಡಿವೋರ್ಸ್ (Divorce) ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನತಾಶಾಗೆ ಗುಡ್ ಬೈ ಹೇಳಿದ್ಮೇಲೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Pandya) ಜೊತೆ ಹಾರ್ದಿಕ್ ಪಾಂಡ್ಯ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಮಾನಿ ಹಬ್ಬಿದೆ.
ಬಾಲಿವುಡ್‌ನಲ್ಲಿ ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಕಾಮನ್ ಆಗಿದೆ. ಸೆಲೆಬ್ರಿಟಿಗಳು ಹಿಂದಿನ ಬದುಕಿನ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಾರೆ. ಹೀಗಿರುವಾಗ ನತಾಶಾಗೆ ಡಿವೋರ್ಸ್ ಕೊಟ್ಟು ಸಿಂಗಲ್ ಆಗಿರುವ ಹಾರ್ದಿಕ್ ಪಾಂಡ್ಯ ಜೊತೆ ನಟಿ ಅನನ್ಯಾ ಮಿಂಗಲ್ ಆಗೋಕೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾರ್ದಿಕ್ ಮತ್ತು ಅನನ್ಯಾ ಡೇಟಿಂಗ್ ಬಗ್ಗೆ ಅಧಿಕೃತಪಡಿಸಿಲ್ಲ. ಆದರೆ ಈ ಸುದ್ದಿಗೆ ಪುಷ್ಠಿ ನೀಡಿರೋದು ಮಾತ್ರ ಅಂಬಾನಿ ಮನೆ ಮದುವೆ. ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕುಣಿದಿರುವ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರ ಡ್ಯಾನ್ಸ್ ನೋಡಿ ಇವರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
View this post on Instagram
ಈ ಕಾರ್ಯಕ್ರಮದ ಬಳಿಕ ಇಬ್ಬರೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನೊಬ್ಬರು ಹಿಂಬಾಲಿಸುತ್ತಿದ್ದಾರೆ. ಇತ್ತ ಅನನ್ಯಾ ಪಾಂಡೆ ಕೂಡ ಆದಿತ್ಯಾ ರಾಯ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಹಾಗಾಗಿ ಅನನ್ಯಾ ಮತ್ತು ಹಾರ್ದಿಕ್ ನಡುವೆ ಹೊಸ ಪ್ರೇಮ ಕಹಾನಿ ಶುರುವಾಗಿದೆ ಎಂದೇ ಗುಮಾನಿ ಹಬ್ಬಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ ಕಾದುನೋಡಬೇಕಿದೆ.
ಅಂದಹಾಗೆ, ನತಾಶಾ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜು.18ರಂದು ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.