ಕ್ರಿಕೆಟಿಗ ಧೋನಿ ನಿರ್ಮಾಣದ ಚೊಚ್ಚಲ ಸಿನಿಮಾ ರೆಡಿ

Public TV
1 Min Read
Lets Get Married 1

ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ (M.S. Dhoni) ಪತ್ನಿ‌ ಸಾಕ್ಷಿ (Sakshi) ಜೊತೆಗೂಡಿ ತಮ್ಮದೇ ಧೋನಿ ಎಂಟರ್ ಟೇನ್ಮೆಂಟ್ ಮೂಲಕ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ ಲೆಟ್ಸ್ ಗೆಟ್ ಮ್ಯಾರೀಡ್ (Let’s Get Married). ಟೀಸರ್ ಮೂಲಕ ನಗುವಿನ ಕಿಕ್ ಕೊಟ್ಟಿರುವ ಈ ಚಿತ್ರವನ್ನು ರಾಜ್ಯದಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

Lets Get Married 2

ಇತ್ತೀಚಿಗೆ ಪರಭಾಷೆ ಸಿನಿಮಾಗಳಿಗೆ ಕರುನಾಡಿನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಕೂಡ ಕರ್ನಾಟಕದಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.  ಫ್ಯಾಮಿಲಿ ಎಂಟರ್​ಟೇನರ್ ಕಥಾಹಂದರ ಹೊಂದಿರುವ ಸಿನಿಮಾವನ್ನು ರಮೇಶ್ ತಮಿಳ್​ಮಣಿ  (Ramesh Tamilmani) ನಿರ್ದೇಶನ ಮಾಡಿದ್ದಾರೆ. ನಾಯಕ ಹರೀಶ್ ಕಲ್ಯಾಣ್, (Harish Kalyan)  ನಾಯಕಿ ಇವಾನಾ ನಟಿಸಿದ್ದು, ಹಿರಿಯ ನಟಿ ನದಿಯಾ, ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ರಮೇಶ್ ತಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಶೀಘ್ರದಲ್ಲೇ ಆಡಿಯೋ ಹಾಗೂ ಟ್ರೇಲರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.

Share This Article