ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ – ಕ್ರಿಕೆಟ್ ಆಡ್ತಿದ್ದ ಯುವಕರಿಂದ ರಕ್ಷಣೆ

Public TV
1 Min Read
cricket boys

– ಯುವಕರ ಕೆಲಸಕ್ಕೆ ಎಡಿಜಿಪಿ ಮೆಚ್ಚುಗೆ

ಜೈಪುರ್: ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತೆಯನ್ನು ಕ್ರಿಕೆಟ್ ಆಡುತ್ತಿದ್ದ ಯುವಕರು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಗುರುವಾರ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಾಲಕಿ ಕಿರುಚಿಕೊಳ್ಳುತ್ತಿದ್ದಳು. ಬಾಲಕಿಯ ಕಿರುಚಾಟದ ಸದ್ದು ಕೇಳಿ ಯುವಕರು ಅಲ್ಲಿಗೆ ಓಡಿ ಹೋಗಿದ್ದಾರೆ. ಆಗ ಆರೋಪಿ ಅಪ್ರಾಪ್ತ ಬಾಲಕಿ ಮೇಲೆ ಯತ್ನಿಸುತ್ತಿದ್ದನು. ಬಳಿಕ ಯುವಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

police 1 1

ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಕ್ಕೆ ಎಡಿಜಿಪಿ ಬಿ.ಕೆ ಸೋನಿ ಯುವಕರಿಗೆ ಸರ್ಟಿಫಿಕೇಟ್ ಹಾಗೂ ನಗದನ್ನು ಬಹುಮಾನವಾಗಿ ನೀಡಿದ್ದಾರೆ. ಜವಹಾರ್ ನಗರ ಕಚ್ಚಿ ಬಸ್ತಿಯ ನಿವಾಸಿಯಾಗಿರುವ ಮನೀಶ್(15), ಅಮೀತ್(18), ರೋಹಿತ್ (18) ಹಾಗೂ ಬಾದಲ್ (14) ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಎಡಿಜಿಪಿ ಬಿ.ಕೆ ಸೋನಿ ಯುವಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಯುವಕರ ಈ ಕೆಲಸವನ್ನು ಎಲ್ಲರೂ ಮಾಡಬೇಕು. ದೇಶದ ಪ್ರಜೆಯಾಗಿ ಯುವಕರು ತಮ್ಮ ಕೆಲಸವನ್ನು ಮಾಡಿದ್ದಾರೆ. ಆ ಯುವಕರ ಭವಿಷ್ಯಕ್ಕೆ ನಾನು ಶುಭ ಕೋರುತ್ತೇನೆ” ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *