ಲಂಡನ್: ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ಮ್ಯಾಚ್ ನೋಡುತ್ತಾ ಕೈಯಲ್ಲಿ ತಣ್ಣನೆಯ ಬಿಯರ್ ಹಿಡಿದು ಪಂದ್ಯ ವೀಕ್ಷಣೆ ಮಾಡಬೇಕೆಂದು ಆಸೆ ಹೊಂದಿರುವ ಕ್ರಿಕೆಟ್ ಪ್ರೇಮಿಗಳಿಗೆ ಐಸಿಸಿ ಬಂಪರ್ ಆಫರ್ ನೀಡಿದೆ. ಬಿಯರ್ ಬೆಲೆ ದುಬಾರಿ ಎಂದು ಮೂಗು ಮುರಿಯುತ್ತಿದ್ದ ಮಂದಿಗೆ ಡಿಸ್ಕೌಂಟ್ ಬೆಲೆಯಲ್ಲಿ ಬಿಯರ್ ನೀಡುವುದಾಗಿ ತಿಳಿಸಿದೆ.
ಈ ಬಾರಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೇ ಮೊದಲ ಬಾರಿಗೆ ಬಿಯರಿಗೆ ಡಿಸ್ಕೌಂಟ್ ನೀಡಿ ನಿಮ್ಮ ಪರವಾಗಿ ಹಣವನ್ನು ಪಾವತಿಸುತ್ತೇವೆ ಎಂದು ಹೇಳಿದೆ.
Advertisement
Advertisement
ವಿಶ್ವಕಪ್ ಟೂರ್ನಿಯ ಬಿಯರ್ ಪೂರೈಕೆ ಮಾಡಲು ಭಾರತ ಮೂಲದ ಬಿರಾ 91 ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಂಗ್ಲೆಂಡ್ 11 ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಈ ಎಲ್ಲಾ ಕಡೆ ಬಿರಾ 91 ಸಂಸ್ಥೆಯ ಬಿಯರ್ ಗಳನ್ನೇ ಪೂರೈಕೆ ಮಾಡಲಿದೆ. ಒಂದು ಬಿಯರ್ ಟಿನ್ 9.70 ಡಾಲರ್ (ಸುಮಾರು 670 ರೂ.)ಗೆ ನೀಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಬಿಯರ್ ಸಂಸ್ಥೆಗಳಿಗೆ ಕೋರಿತ್ತು. ಆದರೆ ಅಲ್ಲಿನ ಸಂಸ್ಥೆಗಳು 15.5 ಡಾಲರ್ ನೀಡಲೇ ಬೇಕೆಂದು ಪಟ್ಟು ಹಿಡಿದ ಕಾರಣ ಈ ಕ್ರಮಕ್ಕೆ ಮುಂದಾಗಿದೆ.
Advertisement
ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ನಿರಾಸೆ ಆಗದಂತೆ ನೋಡಿಕೊಳ್ಳಲು ತೀರ್ಮಾನಿಸಿದೆ. ಸುಮಾರು 4 ಕೋಟಿ 52 ಲಕ್ಷ ರೂ. ಮೊತ್ತದಷ್ಟು ಡಿಸ್ಕೌಂಟ್ ನೀಡಲು ಐಸಿಸಿ ನಿರ್ಧರಿಸಿದೆ. ಈ ಮೊತ್ತವನ್ನು ಐಸಿಸಿ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಮಾನವಾಗಿ ಭರಿಸಲಿದೆ.