ನವದೆಹಲಿ: ಭಾರತ (India) ಮತ್ತು ಹಿಂದೂ ವಿರೋಧಿ (Anti Hindu) ಟ್ವೀಟ್ ಮಾಡಿದ್ದಕ್ಕೆ ಪಾಕಿಸ್ತಾನ (Pakistan) ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್‌ಳನ್ನು (Zainab Abbas) ಪಾಕಿಸ್ತಾನಕ್ಕೆ ಗಡೀಪಾರು ಮಾಡಿದೆ.
Complaint against @ZAbbasOfficial filed by Advocate & Social Activist @vineetJindal19 with cyber cell Delhi Police.Requesting to lodge FIR under section 153A,295,506,121 IPC and sec67 IT Act for making derogatory remarks for Hindu faith and beliefs and for anti -Bharat… https://t.co/vctiV98wBT pic.twitter.com/f9C6I0OMuD
— Adv.Vineet Jindal (@vineetJindal19) October 5, 2023
Advertisement
ವಕೀಲ ವಿನೀತ್ ಜಿಂದಾಲ್ (Vineet Jindal) ಅವರು ದೆಹಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಜೈನಾಬ್ ಅಬ್ಬಾಸ್ ವಿರುದ್ಧ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಐಸಿಸಿ ವಿಶ್ವಕಪ್ (ICC World Cup) ನಿರೂಪಕಿ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಜೈನಾಬ್‌ಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ. ಇದನ್ನೂ ಓದಿ: ಪಾಕ್ ಪಂದ್ಯಕ್ಕೆ ಕೇಸರಿ ಜೆರ್ಸಿಯಲ್ಲಿ ಮೆನ್ ಇನ್ ಬ್ಲೂ ಕಣಕ್ಕೆ – ಬಿಸಿಸಿಐನಿಂದ ಖಡಕ್ ಉತ್ತರ
Advertisement
Who gave visa to this Pakistani Shit, Anti Hindu, Anti India, terrorist Zainab Abbas to come to our country ?
Jaishankar and Modi pic.twitter.com/Fw081qdUrm
— Khushi Singh (@KhushiViews) October 6, 2023
Advertisement
ಈ ಸಂಬಂಧ ಸಮಾ ಟಿವಿ ಟ್ವೀಟ್ ಮಾಡಿದ್ದು, ಪಾಕಿಸ್ತಾನಿ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಅವರು ಸುರಕ್ಷತಾ ಕಾಳಜಿಯಿಂದ ಭಾರತದಿಂದ ನಿರ್ಗಮಿಸಿದ್ದಾರೆ. ಸದ್ಯ ಅವರು ದುಬೈನಲ್ಲಿದ್ದಾರೆ ಎಂದು ಹೇಳಿದೆ.
Advertisement
ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ ಅತಿಥಿ ದೇವೋ ಭವ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳು ಸ್ವಾಗತಿಸುವುದಿಲ್ಲ ವಿನೀತ್ ಜಿಂದಾಲ್ ಬರೆದುಕೊಂಡಿದ್ದಾರೆ.
Pak presenter visiting India for ICC WC, Zainab Abbas landed into legal trouble for her Hindu-hating tweets, has now left India.
Samaa Tv first reported "deported from India over a disputed case" only to retract & put it more sophisticatedly "exited India over safety concern".… pic.twitter.com/1ADQkQVt51
— The Hawk Eye (@thehawkeyex) October 9, 2023
ಈ ಹಿಂದೆ ಭಾರತ ವಿರೋಧಿ ಮಾಡಿದ ಟ್ವೀಟ್ ಗಳನ್ನು ಝೈನಾಬ್ ಅಬ್ಬಾಸ್ ಡಿಲೀಟ್ ಮಾಡಿದ್ದರೂ ಈಗ ವೈರಲ್ ಆಗುತ್ತಿದೆ. ಭಾರತದ ಕ್ರಿಕೆಟ್ ಅಭಿಮಾನಿಗಳು ಐಸಿಸಿ, ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದರೆ ಪಾಕಿಸ್ತಾನದ ಅಭಿಮಾನಿಗಳು ಭಾರತ ಸರ್ಕಾರವನ್ನು ದೂಷಣೆ ಮಾಡಲು ಆರಂಭಿಸಿದ್ದಾರೆ.
Web Stories