ನವದೆಹಲಿ: ವಿಶ್ವಕಪ್ 2023 (ಅಹಮದಾಬಾದ್‍ನ) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭಗೊಳ್ಳಲಿದೆ. ಪ್ರಸ್ತುತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿಯ ವಿಶ್ವಕಪ್ ಆಯ್ಕೆ ಸಮಯದಲ್ಲಿ ಫಿಟ್ ಆಗಿರದೆ ಪಂದ್ಯಗಳಿಂದ ವಂಚಿತರಾಗಿರುವ ಪಟ್ಟಿ ಇಲ್ಲಿದೆ.
ರಿಷಭ್ ಪಂತ್ (ಭಾರತ): ಕಳೆದ ವರ್ಷ ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ (Rishabh Pant) ಅವರು ಕ್ರಿಕೆಟ್‍ನಲ್ಲಿ (Cricket) ಪಾಲ್ಗೊಂಡಿಲ್ಲ. ಅವರು ಕ್ರಿಕೆಟ್‍ಗೆ ಮರಳಲು ಭಾರಿ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ: ಪತ್ನಿಗೆ ಡಿವೋರ್ಸ್ ಕೊಟ್ಟ ಶಿಖರ್ ಧವನ್
Advertisement
ಮೈಕೆಲ್ ಬ್ರೇಸ್‍ವೆಲ್ (ನ್ಯೂಜಿಲೆಂಡ್): ಇಂಗ್ಲೆಂಡ್‍ನ ದೇಶೀಯ ಟಿ20 ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ಆಲ್‍ರೌಂಡರ್ ಗಾಯಗೊಂಡು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ವೋರ್ಸೆಸ್ಟರ್‍ಶೈರ್‌ಗಾಗಿ ಆಡುವಾಗ ಅವರು ಗಾಯಗೊಂಡರು. ಅವರು ಗುಣಮುಖರಾಗಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ವರದಿಯಾಗಿದೆ.
Advertisement
ನಸೀಮ್ ಷಾ (ಪಾಕಿಸ್ತಾನ): ವಿಶ್ವದ ಅತ್ಯಂತ ಭರವಸೆಯ ವೇಗಿಗಳಲ್ಲಿ ಒಬ್ಬರಾದ ನಸೀಮ್ ಷಾ ಅವರು ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ವಿಶ್ವಕಪ್‍ನಿಂದ ವಂಚಿತರಾದರು. ಭಾರತ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಸೆಣಸಾಟದಲ್ಲಿ ಅವರು ಗಾಯಗೊಂಡರು. ಅವರು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ.
Advertisement
Advertisement
ಆಶ್ಟನ್ ಅಗರ್ (ಆಸ್ಟ್ರೇಲಿಯಾ): ಗಾಯದಿಂದಾಗಿ ಆಶ್ಟನ್ ಅಗರ್ ಅವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಅವರು ಏಕದಿನ ಪಂದ್ಯದ ವೇಳೆ ಭಾರತದ ವಿರುದ್ಧ ಆಡಿದ್ದರು. ಬಳಿಕ ಗಾಯದ ಸಮಸ್ಯೆ ಮರಳಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ.
ಎಬಾಡೋಟ್ ಹೊಸೈನ್ (ಬಾಂಗ್ಲಾದೇಶ): ಮೊಣಕಾಲು ಗಾಯಗೊಂಡಿದ್ದು ಇವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ಗಾಯ ತೀವ್ರವಾಗಿದ್ದು ದೀರ್ಘಕಾಲದವರೆಗೆ ಇವರು ಆಡುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಅನ್ರಿಚ್ ನಾಟ್ರ್ಜೆ (ದಕ್ಷಿಣ ಆಫ್ರಿಕಾ): ಎಕ್ಸ್‍ಪ್ರೆಸ್ ವೇಗಿ ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತ ಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಬೆನ್ನಿನ ಗಾಯಕ್ಕೆ ಒಳಗಾದರು. ಇವರ ಬದಲಿಗೆ ಲಿಝಾರ್ಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಹಸರಂಗಾ (ಶ್ರೀಲಂಕಾ): ಶ್ರೀಲಂಕಾ ತಂಡದ ಸೂಪರ್‍ಸ್ಟಾರ್ ಹಸರಂಗಾ ಅವರು ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಮಂಡಿಯ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್‍ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅವರು ಏಷ್ಯಾ ಕಪ್ 2023ರಲ್ಲೂ ಕಾಣಿಸಿಕೊಂಡಿರಲಿಲ್ಲ.
ಅಕ್ಷರ್ ಪಟೇಲ್ (ಭಾರತ): ಒಮ್ಮೆ ವಿಶ್ವಕಪ್‍ಗಾಗಿ ಭಾರತದ 15 ಜನರ ತಂಡದ ಭಾಗವಾಗಿದ್ದ ಅಕ್ಷರ್ 2023ರ ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದರು. ಅವರು ಈವರೆಗೂ ಚೇತರಿಸಿಕೊಂಡಿಲ್ಲ. ಅವರ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಸಂಡಾ ಮಗಾಲಾ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವೇಗದ ಆಟಗಾರ ಬಲ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸ್ಥಾನವನ್ನು ಆಂಡಿಲ್ ಫೆಹ್ಲುಕ್ವಾಯೊ ಅವರು ತುಂಬಿದ್ದಾರೆ.
ದುಷ್ಮಂತ ಚಮೀರಾ (ಶ್ರೀಲಂಕಾ): ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಆಡುತ್ತಿರುವಾಗ ಚಮೀರಾ ಗಾಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿಲ್ಲ. ಇದನ್ನೂ ಓದಿ: ICC World Cup 2023: ಇಂದಿನಿಂದ ವಿಶ್ವಕಪ್ ಮಹಾಸಮರ – ಇಂದು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ
Web Stories