ಟೌಂಟನ್: 2019ರ ವಿಶ್ವಕಪ್ ಟೂರ್ನಿ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರರು ಬೃಹತ್ ರನ್ ಗುರಿಯನ್ನೇ ಆಸೀಸ್ ಪಡೆಗೆ ನೀಡಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀರ್ಮಾನವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಅಲ್ಲದೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುವ ಮೂಲಕ ಆಸೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಆರಂಭಿಕರು ಎಂಬ ದಾಖಲೆ ಬರೆದರು. ಈ ಜೋಡಿ 1,152 ರನ್ ಗಳನ್ನು ಆಸೀಸ್ ವಿರುದ್ಧ ಗಳಿಸಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ಆಟಗಾರರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
Advertisement
Hardik Pandya falls just short of his maiden #CWC19 fifty, but his innings has added a real impetus for #TeamIndia!
MS Dhoni joins #ViratKohli at the crease.#INDvAUS #CWC19 pic.twitter.com/ON4f7FW1YU
— ICC Cricket World Cup (@cricketworldcup) June 9, 2019
Advertisement
ಧವನ್-ರೋಹಿತ್ ದಾಖಲೆ:
ಆಸೀಸ್ ವಿರುದ್ಧ 22ನೇ ಬಾರಿ ಜೋಡಿಯಾಗಿ ಕಣಕ್ಕೆ ಇಳಿದ ರೋಹಿತ್, ಧವನ್ ಭಾರತ ಪರ ದಾಖಲೆ ಬರೆದರು. ಉಳಿದಂತೆ ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ಈ ಜೋಡಿ 135 ಎಸೆತಗಳಲ್ಲಿ 127 ರನ್ ಗಳಿಸಿ ಭಾರತ ಪರ ದಾಖಲೆಯ 16ನೇ ಶತಕ ಜೊತೆಯಾಟ ನೀಡಿದರು. ಈ ಹಿಂದೆ ರೋಹಿತ್, ಕೊಹ್ಲಿ 16 ಬಾರಿ ಶತಕ ಜೊತೆಯಾಟ ಆಡಿದ್ದರು. ಭಾರತ ಪರ ಸಚಿನ್ ಗಂಗೂಲಿ ಜೋಡಿ 26 ಶತಕಗಳ ಜೊತೆಯಾಟ ನೀಡಿದೆ.
Advertisement
Hardik Pandya is on ????
He's 41* from just 22 balls and #TeamIndia are 281/2 with six overs remaining.#INDvAUS #CWC19 pic.twitter.com/E4GvOdjUkw
— ICC Cricket World Cup (@cricketworldcup) June 9, 2019
Advertisement
ಪಂದ್ಯದಲ್ಲಿ ರೋಹಿತ್ ಶರ್ಮಾ 70 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಸೇರಿದಂತೆ 57 ಕಲೆ ಹಾಕಿದರು. ಇತ್ತ ಶಿಖರ್ ಧವನ್ 109 ಎಸೆತಗಳಲ್ಲಿ 16 ಬೌಂಡರಿ ಸಿಡಿಸುವ ಮೂಲಕ 117 ರನ್ ಗಳಿಸಿದರು. 32 ವರ್ಷದ ರೋಹಿತ್ ಆಸೀಸ್ ವಿರುದ್ಧ ವೇಗವಾಗಿ 2 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದು, 37 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ 40 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಗಳಿಸಿದ ಸಚಿನ್ ತೆಂಡಲ್ಕೂರ್ ಸಾಧನೆಯನ್ನ ಹಿಂದಿಕ್ಕಿದ್ದಾರೆ.
ವಿಶ್ವಕಪ್ ಶತಕ:
ಇತ್ತ ಧವನ್ ವೃತ್ತಿ ಜೀವನದಲ್ಲಿ 17 ಶತಕ ಸಾಧನೆ ಮಾಡಿದ್ದು, ವಿಶ್ವಕಪ್ ನಲ್ಲಿ 3ನೇ ಶತಕ ಇದಾಗಿದೆ. 2015ರ ವಿಶ್ವಕಪ್ ನಲ್ಲಿ ಶತಕ ಸಾಧನೆ ಮಾಡಿದ್ದ ಧವನ್ ಈ ಪಂದ್ಯದಲ್ಲಿ 95 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಭಾರತದ ಪರ ಸಚಿನ್ ವಿಶ್ವಕಪ್ ನಲ್ಲಿ 6 ಶತಕ ಸಿಡಿಸಿದ್ದು, ಗಂಗೂಲಿ 4 ಶತಕ ಸಿಡಿಸಿ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದಿದ್ದಾರೆ. ಭಾರತದ ಬ್ಯಾಟ್ಸ್ ಮನ್‍ಗಳು ವಿಶ್ವಕಪ್ ನಲ್ಲಿ 27 ಶತಕಗಳನ್ನು ಸಿಡಿಸಿದ್ದು, 26 ಶತಕಗಳೊಂದಿಗೆ ಆಸೀಸ್ 2ನೇ ಸ್ಥಾನದಲ್ಲಿದೆ.
It's been tough going for Australia today but Mitchell Starc provided momentary relief with the wicket of Shikhar Dhawan.#INDvAUS #CWC19 #TeamIndia #CmonAussiehttps://t.co/ch826497oo
— ICC Cricket World Cup (@cricketworldcup) June 9, 2019
ಕಳೆದ ಪಂದ್ಯದಲ್ಲಿ ಬಹುಬೇಗ ನಿರ್ಗಮಿಸಿದ್ದ ನಾಯಕ ಕೊಹ್ಲಿ ಕೂಡ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಧವನ್ ರೊಂದಿಗೆ ಕೂಡಿದ 2ನೇ ವಿಕೆಟ್‍ಗೆ 93 ರನ್‍ಗಳ ಜೊತೆಯಾಟ ನೀಡಿದರು. ಧವನ್ ಔಟಾಗುತ್ತಿದಂತೆ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟ ಪ್ರದರ್ಶಸಿದರು. 28 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಗಳ ನೆರವಿನಿಂದ 48 ರನ್ ಸಿಡಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದರು. ಆ ವೇಳೆಗೆ ಕೊಹ್ಲಿ- ಹಾರ್ದಿಕ್ ಜೋಡಿ 53 ಎಸೆತಗಳಲ್ಲಿ 81 ರನ್ ಗಳಿಸಿತ್ತು.
Who else but Mitchell Starc to end a fantastic innings from Shikhar Dhawan!
The #TeamIndia opener is dismissed for 117, India 220/2.#INDvAUS #CmonAussie pic.twitter.com/p7tfqkCTjy
— ICC Cricket World Cup (@cricketworldcup) June 9, 2019
ಒಂದು ಬದಿಯಲ್ಲಿ ಹಾರ್ದಿಕ್ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದರೆ ಕೊಹ್ಲಿ ಕೂಡ ತಮ್ಮ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದ್ದರು. 55 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಕೊಹ್ಲಿ, 77 ಎಸೆತಗಳಲ್ಲಿ 82 ರನ್ ಗಳಿಸಿ ನಿರ್ಗಮಿಸಿದರು. ಇತ್ತ ಧೋನಿ 14 ಎಸೆತಗಳಲ್ಲಿ ಸಿಕ್ಸರ್, 4 ಬೌಂಡರಿ ಸಮೇತ 27 ರನ್ ಗಳಿಸಿ ಭಾರಿ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್ ಗಳಲ್ಲಿ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ 3 ಎಸೆತಗಳಲ್ಲಿ 11 ರನ್, ಜಾಧವ್ ಔಟಾಗದೆ ಉಳಿದರು. ಆಸೀಸ್ ಪರ ಸ್ಟೋಯಿನ್ಸ್ 2 ವಿಕೆಟ್ ಪಡೆದರೆ, ಕಮ್ಮಿನ್ಸ್, ಸ್ಟಾರ್ಕ್, ನೀಲ್ ತಲಾ 1 ವಿಕೆಟ್ ಪಡೆದರು.