ಬರ್ಮಿಂಗ್ ಹ್ಯಾಮ್: ಭಾರತದ ವಿರುದ್ಧ 31 ರನ್ ಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.
ಗೆಲ್ಲಲು 338 ರನ್ ಗಳ ಗುರಿಯನ್ನು ಪಡೆದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿದೆ.
Advertisement
ಈ ಪಂದ್ಯವನ್ನು ಭಾರತ ಗೆದ್ದಿದ್ದರೆ ಪಾಕಿಸ್ತಾನ ಬಾಂಗ್ಲಾ ವಿರುದ್ಧ ಪಂದ್ಯ ಜಯಗಳಿಸಿದರೆ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದಿತ್ತು.ಆದರೆ ಈಗ ಇಂಗ್ಲೆಂಡ್ ಅಂಕಪಟ್ಟಿಯ ನಾಲ್ಕನೇಯ ಸ್ಥಾನಕ್ಕೆ ಏರಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನಕ್ಕೆ ತಲಾ ಒಂದು ಪಂದ್ಯ ಬಾಕಿ ಇದೆ. ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ.
Advertisement
Rohit Sharma at #CWC19
122*
57
140
1
18
100*
After two low scores, the Hitman is back with a bang, bringing up his third ???? at the competition, off 106 balls ????
No Indian batsman has ever made more at a single World Cup ????#ENGvIND | #TeamIndia pic.twitter.com/MkHpoWjq4d
— ICC Cricket World Cup (@cricketworldcup) June 30, 2019
Advertisement
ರೋಹಿತ್ ಶರ್ಮಾ 102 ರನ್ (109 ಎಸೆತ, 15 ಬೌಂಡರಿ), ವಿರಾಟ್ ಕೊಹ್ಲಿ 66 ರನ್ (76 ಎಸೆತ, 7 ಬೌಂಡರಿ), ಹಾರ್ದಿಕ್ ಪಾಂಡ್ಯ 45 ರನ್ ಹಾಗೂ ಎಂ.ಎಸ್.ಧೋನಿ 42 ರನ್ ಹೊಡೆದರು. ಆರಂಭದಲ್ಲೆ ರಾಹುಲ್ ಔಟ್ ನಂತರ ಕೊನೆಯ ಸ್ಲಾಗದ ಓವರ್ ಗಳಲ್ಲಿ ಸಿಕ್ಸರ್ ,ಬೌಂಡರಿಗಳು ಸಿಡಿಯದ ಕಾರಣ ಭಾರತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.
Advertisement
ಸತತ 5ನೇ ಫಿಫ್ಟಿ ಸಾಧನೆ:
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರಂತರ 5 ಬಾರಿ ಅರ್ಧ ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. 2015ರ ವಿಶ್ವಕಪ್ ಟೂರ್ನಿನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸಮನ್ ಸ್ಟೀವ್ ಸ್ಮೀತ್ ಸತತವಾಗಿ 5 ಅರ್ಧ ಶತಕ ಬಾರಿಸಿದ್ದರು. ಸ್ಮೀತ್ ಬಳಿಕ ನಿರಂತರವಾಗಿ 5 ಫಿಫ್ಟಿ ದಾಖಲಿಸಿದ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
18
82
77
67
72
50*
It's five consecutive half-centuries for India's captain ????
Is today the day he gets to ?????#ENGvIND | #TeamIndia pic.twitter.com/vmJAUG4pqF
— ICC Cricket World Cup (@cricketworldcup) June 30, 2019
ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ 82 ರನ್, ಅಫ್ಘಾನಿಸ್ತಾನದ ವಿರುದ್ಧ 77 ರನ್, ಪಾಕಿಸ್ತಾನದ ವಿರುದ್ಧ 67 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 72 ರನ್ ಸಿಡಿಸಿದರು. ಬರ್ಮಿಂಗ್ ಹ್ಯಾಮ್‍ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 66 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಬೈರ್ಸ್ಟೋವ್ ಶತಕ, ಜೇಸನ್ ರಾಯ್ (66 ರನ್) ಹಾಗೂ ಬೆನ್ ಸ್ಟೋಕ್ಸ್ (69 ರನ್) ಅರ್ಧ ಶತಕ ಸಹಾಯದಿಂದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು.
Can MS Dhoni get going quickly?
He's 8 off 9, with seven coming off Chris Woakes' penultimate over.#CWC19 | #ENGvIND pic.twitter.com/fhLfRRKLkN
— ICC Cricket World Cup (@cricketworldcup) June 30, 2019
160 ರನ್ ಜೊತೆಯಾಟ:
ಇಂಗ್ಲೆಂಡ್‍ನ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಬೈರ್‌ಸ್ಟೋವ್ ಎಚ್ಚರಿಕೆಯ ಆಟವಾಡುವ ಮೂಲಕ ಉತ್ತಮ ಆರಂಭ ನೀಡಿದರು. ಇಂಗ್ಲೆಂಡ್ ಇನ್ನಿಂಗ್ಸ್ ನ 21ನೇ ಓವರ್ ಅಂತ್ಯಕ್ಕೆ ಈ ಜೋಡಿ 160 ರನ್ ಗಳಿಸಿತ್ತು. ಆದರೆ 22ನೇ ಓವರ್ ನ ಮೊದಲ ಎಸೆತದಲ್ಲಿಯೇ ರಾಯ್ ವಿಕೆಟ್ ಒಪ್ಪಿಸಿದರು. 57 ಎಸೆತಗಳನ್ನು ಎದುರಿಸಿದ ರಾಯ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ 66 ರನ್ ಗಳಿಸಿದ್ದರು.
ಬೈರ್‌ಸ್ಟೋವ್ ಶತಕ:
ರಾಯ್ ಜೊತೆಗೆ ಸಾಥ್ ನೀಡುತ್ತ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದ ಬೈರ್‌ಸ್ಟೋವ್, ಮುಂದಿನ 33 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ವಿಶ್ವಕಪ್‍ನಲ್ಲಿ ಮೊದಲ ಶತಕದ ಖಾತೆಯನ್ನು ಬೈರ್‌ಸ್ಟೋವ್ ತೆರೆದಿದ್ದಾರೆ. ಆದರೆ ಶತಕದ ಬಳಿಕ ಮೊಹಮ್ಮದ್ ಶಮಿ ಬೈರ್‌ಸ್ಟೋವ್ ವಿಕೆಟ್ ಪಡೆದರು. 109 ಎಸೆತಗಳನ್ನು ಎದುರಿಸಿದ ಬೈರ್ಸ್ಟೋವ್ 10 ಬೌಂಡರಿ, 6 ಸಿಕ್ಸರ್ ಗಳಿಂದ 111 ರನ್ ಗಳಿಸಿದರು. ಉಳಿದಂತೆ ಬೆನ್ ಸ್ಟೋಕ್ಸ್ 54 ಎಸೆತಗಳಲ್ಲಿ 79 ರನ್ ಸಿಡಿಸಿ ತಂಡದ 300 ರನ್ ಗಡಿದಾಟಲು ಕಾರಣರಾಗಿದ್ದರು.
Chris Woakes' first three overs today:
. . . . . . | . . W . . . | . . . . . .
The Wizard has started his spell with three maidens on the bounce, and claimed the key wicket of KL Rahul ???? ???? #ENGvIND | #CWC19 | #WeAreEngland pic.twitter.com/bdc5W0YcNb
— ICC Cricket World Cup (@cricketworldcup) June 30, 2019
ಶಮಿಗೆ 5 ವಿಕೆಟ್:
ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ದ ಬೈರ್ಸ್ಟೋವ್ ಹಾಗೂ ನಾಯಕ ಇಯಾನ್ ಮಾರ್ಗನ್ (1 ರನ್) ವಿಕೆಟ್ ಕೀಳುವ ಮೂಲಕ ಮೊಹಮ್ಮದ್ ಶಮಿ ಮಿಂಚಿದ್ದಾರೆ. ಅಲ್ಲದೇ ಇನ್ನಿಂಗ್ಸ್ ನ 44 ಓವರ್ ನ ಮೊದಲ ಎಸೆತದಲ್ಲಿ 44 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಪಡೆದರು. ಅಂತಿಮ ಅಂತದಲ್ಲಿ ಬಲ್ಟರ್ (20 ರನ್) ಹಾಗೂ ವೋಕ್ಸ್ (7 ರನ್) ವಿಕೆಟ್ ಪಡೆದು ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. 10 ಓವರ್ ಬೌಲ್ ಮಾಡಿದ ಶಮಿ 5 ವಿಕೆಟ್ ಪಡೆದು 69 ರನ್ ಬಿಟ್ಟುಕೊಟ್ಟಿದ್ದರು.
???????????????????????????? v ???????? in World Cups
1975 ????????????????????????????
1983 ????????
1987 ????????????????????????????
1992 ????????????????????????????
1999 ????????
2003 ????????
2011 ↔️
2019 ????????????????????????????
Today's win is England's first in #CWC v India in 27 years! pic.twitter.com/L76MSQQbCw
— ICC Cricket World Cup (@cricketworldcup) June 30, 2019
ದುಬಾರಿಯಾದ ಚಹಲ್, ಕುಲ್ದೀಪ್:
ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿ ಯಜುವೇಂದ್ರ ಚಹಲ್ 88 ರನ್ ನೀಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸಮನ್‍ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾದ ಚಹಲ್ 10 ಓವರ್ ಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಮೂಲಕ 8.80 ಎಕೆನಾಮಿಯಲ್ಲಿ 88 ರನ್ ನೀಡಿದ್ದಾರೆ. ಇತ್ತ ಕುಲ್ದೀಪ್ ಯಾದವ್ ಕೂಡ ತಮ್ಮ ಸ್ಪೇಲ್‍ನಲ್ಲಿ 72 ರನ್ ನೀಡಿ ದುಬಾರಿಯಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ 60 ರನ್ ನೀಡಿದರೆ, ವೇಗಿ ಬುಮ್ರಾ ಒಂದು ವಿಕೆಟ್ ಪಡೆದು 44 ರನ್ ನೀಡಿದ್ದರು.
Here's how the #CWC19 table looks after today's result ????
Remarkably, none of India, New Zealand, England, Bangladesh, or Pakistan have qualified for the semi-finals, but all have their fate in their own hands!
Who do you think will end in the top four? pic.twitter.com/DM3sHRLoA3
— ICC Cricket World Cup (@cricketworldcup) June 30, 2019