2028 ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ

Public TV
1 Min Read
Team India 3 1

ನವದೆಹಲಿ: 2028ರ ಒಲಿಂಪಿಕ್ಸ್‌ (Olympic Games) ಕ್ರೀಡೆಗಳ ಪಟ್ಟಿಗೆ ಈಗ ಕ್ರಿಕೆಟ್‌ ಕೂಡ ಸೇರ್ಪಡೆಯಾಗಿದೆ. 2028 ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ (Los Angles) ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೂ (Cricket) ಅವಕಾಶ ಕಲ್ಪಿಸಲಾಗಿದೆ. 123 ವರ್ಷಗಳ ಬಳಿಕ ಕ್ರಿಕೆಟ್‌ಗೆ ಈ ಸ್ಥಾನ ಲಭಿಸಿದೆ.

ಟಿ20 ಮಾದರಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕ್ರೀಡಾಕೂಟ ನಡೆಯಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ 141ನೇ ಅಧಿವೇಶನದಲ್ಲಿ ಸ್ಕ್ವಾಷ್, ಬೇಸ್‌ಬಾಲ್/ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಕ್ರೀಡೆಗಳಿಗೂ ಅನುಮೋದನೆ ನೀಡಲಾಗಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಗಳೂ ಸಹ ಇರಲಿವೆ. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ

ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು, ಒಲಿಂಪಿಕ್ಸ್‌ನಲ್ಲಿ ಇತರೆ ಕ್ರೀಡೆಗಳೊಂದಿಗೆ ಕ್ರಿಕೆಟ್ ಸೇರ್ಪಡೆ ಕುರಿತು ಘೋಷಣೆ ಮಾಡಿದರು.

ಲಾಸ್‌ ಏಂಜಲೀಸ್‌ 2028 ರ ಸಂಘಟನಾ ಸಮಿತಿಯು ಶಿಫಾರಸು ಮಾಡಿದ ಐದು ಕ್ರೀಡೆಗಳನ್ನು ಸೇರಿಸುವ ಪ್ರಸ್ತಾಪಕ್ಕೆ 99 IOC ಸದಸ್ಯ ರಾಷ್ಟ್ರಗಳ ಪೈಕಿ ಎರಡು ರಾಷ್ಟ್ರಗಳು ಮಾತ್ರ ಅಸಮ್ಮತಿ ಸೂಚಿಸಿವೆ.

ವಿಶ್ವದಾದ್ಯಂತ ಅಂದಾಜು 2.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಥಾಮಸ್‌ ಬಾಚ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್‌ ಘೋಷಣೆ: ಉದಯನಿಧಿ ಆಕ್ಷೇಪ

Web Stories

Share This Article