ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳು ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಡಳಿತ ಮಂಡಳಿ ಆಟಗಾರರಿಗೆ ಡಬಲ್ ಬೋನಾನ್ಜಾ ನೀಡಿದ್ದು, ವಿದೇಶಿ ಟೂರ್ನಿಗೆ ತೆರಳಿದ ಸಂದರ್ಭದಲ್ಲಿ ಆಟಗಾರರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಡಬಲ್ ಮಾಡಿದೆ.
ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲದೆ ತಂಡದೊಂದಿಗೆ ತೆರಳುವ ಮ್ಯಾನೇಜ್‍ಮೆಂಟ್ ತಂಡ ಸದಸ್ಯರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಹೆಚ್ಚಿಸಿದೆ. ಇದುವರೆಗೂ ದಿನದ ಭತ್ಯೆಯಾಗಿ ಆಟಗಾರರಿಗೆ 125 ಡಾಲರ್ (ಸುಮಾರು 8 ಸಾವಿರ ರೂ.) ನೀಡಲಾಗುತ್ತಿತ್ತು. ಸದ್ಯ ಭತ್ಯೆ ಹೆಚ್ಚಳ ಮಾಡಿರುವುದರಿಂದ 250 ಡಾಲರ್ (ಸುಮಾರು 17 ಸಾವಿರ ರೂ.) ಲಭಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
#TeamIndia Test team members @Jaspritbumrah93, @ajinkyarahane88 and @cheteshwar1 gearing up in the nets at the NCA #INDvSA pic.twitter.com/9myWS0SmUp
— BCCI (@BCCI) September 20, 2019
Advertisement
ವರದಿಯ ಅನ್ವಯ ಕ್ರಿಕೆಟಿಗರ ದಿನದ ಭತ್ಯೆ ಮಾತ್ರವಲ್ಲದೇ ಪ್ರಯಾಣ ಭತ್ಯೆಯನ್ನು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಆಟಗಾರರು, ಸಿಬ್ಬಂದಿಗೆ ಇತರ ಸೌಲಭ್ಯಗಳನ್ನು ಬಿಸಿಸಿಐ ಪ್ರತ್ಯೇಕವಾಗಿ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಡಿಮ್ಯಾಂಡ್ ಮೇರೆಗೆ ಆಟಗಾರರು ಹಾಗೂ ಸಿಬ್ಬಂದಿಯ ಸಂಬಳವನ್ನು ಬಿಸಿಸಿಐ ಶೇ.200 ರಷ್ಟು ಹೆಚ್ಚಿಸಿದ್ದ ಸಂಗತಿ ಎಲ್ಲರಿಗೂ ತಿಳಿಸಿದಿದೆ. ಪ್ರತಿ ವರ್ಷ ‘ಎ’ ಪ್ಲಸ್ ಶ್ರೇಣಿಯಲ್ಲಿದ್ದ ಆಟಗಾರರು 7 ಕೋಟಿ ರೂ. ಸಂಭಾವನೆಯನ್ನು ಪಡೆದರೆ, ‘ಎ’ ಗ್ರೇಡ್ ಪಟ್ಟಿಯಲ್ಲಿನ ಆಟಗಾರರು 5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಬಿಸಿಸಿಐ ತನ್ನ ಒಪ್ಪಂದ ಪಟ್ಟಿಯಲ್ಲಿ ‘ಎ’ ಪ್ಲಸ್ ಶ್ರೇಣಿಯನ್ನು ನೀಡಿತ್ತು. ಉಳಿದಂತೆ ‘ಬಿ’ ಶ್ರೇಣಿಯ ಆಟಗಾರರು 3 ಕೋಟಿ ರೂ., ‘ಸಿ’ ಶ್ರೇಣಿಯ ಆಟಗಾರರು 1 ಕೋಟಿ ರೂ. ಪಡೆಯುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಆಟಗಾರರಲ್ಲಿ ‘ಎ’ ಶ್ರೇಣಿಯ ಆಟಗಾರರು 50 ಲಕ್ಷ ರೂ., ‘ಬಿ’ ಶ್ರೇಣಿಯ ಆಟಗಾರರು 30 ಲಕ್ಷ ರೂ. ಹಾಗೂ ‘ಸಿ’ ಶ್ರೇಣಿಯ ಆಟಗಾರರು 10 ಲಕ್ಷ ರೂ. ಪಡೆಯುತ್ತಿದ್ದಾರೆ.