`ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

Public TV
3 Min Read
Bunny Hop Catch

ಸಿಸಿ ಆಗಿಂದಾಗೇ ಕ್ರಿಕೆಟ್‌ನಲ್ಲಿ ಕೆಲ ನಿಯಮಗಳ ಬದಲಾವಣೆ ಮಾಡುತ್ತಲೇ ಇರುತ್ತದೆ. ಈಗ ಮತ್ತೆ ಅಂತಹದೇ ಮಹತ್ವದ ಬದಲಾವಣೆ ಒಂದಕ್ಕೆ ಐಸಿಸಿ (International Cricket Council) ಮುಂದಾಗಿದೆ. ಈ ಹಿಂದೆ ವಿವಾದಕ್ಕೂ ಕಾರಣವಾಗಿದ್ದ ಈ ನಿಯಮವನ್ನು ಐಸಿಸಿ ಕೈಬಿಡಲು ಮುಂದಾಗಿರುವುದು ಕ್ರಿಕೆಟ್ ಪ್ರಿಯರಿಗೆ ಕೊಂಚ ನಿರಾಸೆಗೆ ಕಾರಣವಾಗಿದೆ.

ಹೌದು, ಐಸಿಸಿ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಹೊಸ ಕ್ಯಾಚ್ ನಿಯಮವನ್ನು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (MCC) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದಿಟ್ಟಿದ್ದು, ಈ ನಿಯಮ 2025-2027ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯೊಂದಿಗೆ ಆರಂಭವಾಗಿದೆ. ಇದನ್ನೂ ಓದಿ: NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಫೀಲ್ಡರ್ `ಬನ್ನಿ ಹಾಪ್ ಕ್ಯಾಚ್’ಗಳನ್ನ (Bunny hop) ಹಿಡಿದರೆ ಔಟ್ ಎಂದು ಪರಿಗಣಿಸುವುದಿಲ್ಲ. ಅಂದರೆ ಬೌಂಡರಿ ಲೈನ್ ದಾಟಿ ಚೆಂಡನ್ನು ತಡೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಫೀಲ್ಡರ್‌ನ ಮೊದಲ ಸ್ಪರ್ಶವು ಬೌಂಡರಿ ಗೆರೆಯಿಂದ ಒಳಗಿದ್ದು, ಅವರ ಎರಡನೇ ಸ್ಪರ್ಶವು ಅವರನ್ನು ಮತ್ತೆ ಮೈದಾನದ ಒಳಗೆ ಕೊಂಡೊಯ್ಯಬೇಕು. ಇದರ ಹೊರತಾಗಿ ಬೌಂಡರಿ ಲೈನ್‌ನ ಹೊರಗೆ ಗಾಳಿಯಲ್ಲಿ ಚೆಂಡನ್ನು ಮೈದಾನದ ಒಳಕ್ಕೆ ಎಸೆಯುವಂತಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

ಇತ್ತೀಚೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರು ಇದೇ ರೀತಿ ಹಿಡಿದ ಪ್ರಯಾಂಶ್ ಆರ್ಯ ಅವರ ಕ್ಯಾಚ್‌ವೊಂದು ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕವಾಗಿತ್ತು. 2023ರಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಈ ರೀತಿಯ ಕ್ಯಾಚ್ ವಿವಾದಕ್ಕೆ ಕಾರಣವಾಗಿತ್ತು. ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಮೈಕೆಲ್ ನೆಸರ್ ಬೌಂಡರಿ ಲೈನ್ ಹೊರಗೆ ಹೋಗಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು, ಮತ್ತೆ ಮೈದಾನಕ್ಕೆ ಎಸೆದು ಕ್ಯಾಚ್ ಹಿಡಿದಿದ್ದರು. ಅದನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನೂ ಓದಿ: ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

ಹೀಗೆ ಕ್ಯಾಚ್ ಹಿಡಿಯಲು ಅವಕಾಶವಿದ್ದ ಕಾರಣ, ಹಲವು ಲೀಗ್‌ಗಳಲ್ಲಿ ಬನ್ನಿ ಹಾಪ್ ಕ್ಯಾಚ್‌ಗಳ ಪ್ರಯತ್ನಗಳು ಸಹ ನಡೆದಿದ್ದವು. ಇದರ ಬೆನ್ನಲ್ಲೇ ಐಸಿಸಿಯ ಈ ನಿಯಮದ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಹೀಗಾಗಿ ಇದೀಗ ಬನ್ನಿ ಹಾಪ್ ಕ್ಯಾಚ್‌ಗಳಿಗೆ ಬ್ರೇಕ್ ಹಾಕಲು ಐಸಿಸಿ ನಿರ್ಧರಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ಫೀಲ್ಡರ್‌ಗಳು ಮೈದಾನದ ಹೊರಗೆ ನಿಂತು ಗಾಳಿಯಲ್ಲಿ ಚೆಂಡನ್ನು ಹೊರಕ್ಕೆ ಎಸೆಯುವಂತಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

ಹೊಸ ಕ್ಯಾಚ್ ನಿಯಮವನ್ನು ಜೂನ್ 17ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಲ್ಲದೇ ಅಕ್ಟೋಬರ್ 2026ರಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೊಳ್ಳಲಿದೆ.

Share This Article