ಕ್ರಿಕೆಟ್ ಪ್ರೀಮಿಯರ್ ಲೀಗ್‍ಗೆ ನಟಿ ಹರಿಪ್ರಿಯಾ ಚಾಲನೆ

Public TV
1 Min Read
HARIPRRIYA

ಬೆಂಗಳೂರು: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ದಾಸನಪುರ ಕ್ರಿಕೆಟ್ ಪ್ರೀಮಿಯರ್ ಲೀಗ್‍ಗೆ ನಟಿ ಹರಿಪ್ರಿಯಾ ಹಾಗೂ ಕ್ರಿಕೆಟಿಗ ದೊಡ್ಡ ಗಣೇಶ್ ಚಾಲನೆ ನೀಡಿದ್ದಾರೆ.

ಈ ಕ್ರಿಕೆಟ್ ಲೀಗ್ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ನೈಸ್ ಮೈದಾನದಲ್ಲಿ ಚಾಲನೆ ದೊರೆತಿದೆ. ಯುವ ಆಟಗಾರರನ್ನ ಪ್ರೋತ್ಸಾಹಿಸಲು ನಟಿ ಹರಿಪ್ರಿಯಾ ಎಲ್ಲರ ಕೈಕುಲುಕುವ ಮೂಲಕ ಹುಮ್ಮಸ್ಸು ಹೆಚ್ಚಿಸಿದ್ದಾರೆ. ಈ ವೇಳೆ ಮಾತನಾಡಿದ ಹರಿಪ್ರಿಯಾ, ಕ್ರಿಕೆಟ್ ನೋಡಲು ಖುಷಿಕೊಡುತ್ತದೆ. ನಾನು ಕ್ರಿಕೆಟ್ ವ್ಯಕ್ತಿಯಲ್ಲ, ಆದರೂ ಕ್ರಿಕೆಟ್ ಇಷ್ಟ. ಎಲ್ಲರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

NML 1

ಈ ಕ್ರಿಕೆಟ್ ಲೀಗ್‍ನಲ್ಲಿ ಸ್ಥಳೀಯ ಗ್ರಾಮೀಣ ಯುವಕರ ಎಂಟು ತಂಡಗಳು ಭಾಗವಹಿಸಿದ್ದು, ಐಪಿಎಲ್ ಮಾದರಿಯಂತೆ ಆಟಗಾರರನ್ನ ಗುರುತಿಸಲಾಗಿದೆ. ಚಿಯರ್ ಗರ್ಲ್ಸ್ ಕೂಡ ಆಟ ನೋಡಲು ನೆರದಿದ್ದ ಜನರನ್ನ ತಮ್ಮತ್ತ ಸೆಳೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *