ನವದೆಹಲಿ: ಕ್ರಿಕೆಟ್ ಆಟವನ್ನು ಕೆಲ ಅಭಿಮಾನಿಗಳು ಜೀವನದ ಒಂದು ಭಾಗದಂತೆ ನೋಡುತ್ತಾರೆ. ನೆಚ್ಚಿನ ತಂಡ ಸೋತರೇ ಕಣ್ಣೀರು ಹಾಕುತ್ತಾರೆ. ಗೆಲ್ಲಲಿ ಎಂದು ದೇವರ ಮೊರೆ ಹೋಗುತ್ತಾರೆ. ಅಂತೆಯೇ ಸ್ಟಾರ್ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿರುವ ಪ್ರಸಂಗಗಳು ನಡೆದಿವೆ.
ಕ್ರಿಕೆಟ್ ಆಟದಲ್ಲಿ ಒಂದು ಪಂದ್ಯ ಎಂದರೆ ಸೋಲು ಗೆಲವು ಕಾಮನ್ ಇದನ್ನೂ ಆಟಗಾರರೂ ಕ್ರೀಡಾಮನೋಭಾವದಿಂದ ನೋಡಿ ಸುಮ್ಮನಗುತ್ತಾರೆ. ಆದರೆ ಕೆಲ ಆಟಗಾರರು ಪಂದ್ಯಗಳನ್ನು ಸೋತಾಗ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಸಚಿನ್, ಯುವರಾಜ್ ಸಿಂಗ್ ಹೀಗೆ ಕ್ರಿಕೆಟ್ ದಿಗ್ಗಜರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.
Advertisement
Advertisement
ಇದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುವರಾಜ್ ಸಿಂಗ್ ಅವರು, 2011ರಲ್ಲಿ 28 ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದು ಬೀಗಿತ್ತು. ಈ ಟೂರ್ನಿಯಲ್ಲಿ ಕ್ಯಾನ್ಸರ್ ಇದ್ದರೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವಿ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊನೆಗೆ ಫೈನಲ್‍ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಾಗ ಮೈದಾನದಲ್ಲಿ ಇದ್ದ ಯುವರಾಜ್ ಕಣ್ಣೀರು ಹಾಕಿದ್ದರು.
Advertisement
Advertisement
ಇದಾದ ನಂತರ 2015ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಕಣ್ಣೀರು ಹಾಕಿದ್ದರು. 2015ರ ವಿಶ್ವಕಪ್‍ನಲ್ಲಿ ಎಬಿಡಿ ನೇತೃತ್ವದ ತಂಡ ಬಹಳ ಚೆನ್ನಾಗಿ ಆಡಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಈ ಸಮಯದಲ್ಲಿ ತಂಡದ ನಾಯಕ ಡಿವಿಲಿಯರ್ಸ್ ಮೈದಾನದಲ್ಲೇ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಂದು ಸೌತ್ ಆಫ್ರಿಕಾದ ಹಲವು ಆಟಗಾರರು ಮೈದಾನದಲ್ಲೇ ಕುಳಿತುಕೊಂಡು ಅತ್ತಿದ್ದರು.
ಮೈದಾನದಲ್ಲಿ ಅಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. 2012ರ ಟಿ-20 ವಿಶ್ವಕಪ್ ವೇಳೆ ಭಾರತ ಬಹಳ ಚೆನ್ನಾಗಿ ಆಡಿತ್ತು. ಅಂದು ಉತ್ತಮ ಲಯದಲ್ಲಿ ಇದ್ದ ಕೊಹ್ಲಿ ಟೂರ್ನಿಯುದ್ದಕ್ಕೂ ಸಖತ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ಸೆಮಿಫೈನಲ್ ತಲುಪುವಲ್ಲಿ ಭಾರತ ಎಡವಿತ್ತು. ಈ ಸಮಯದಲ್ಲಿ ಕೊಹ್ಲಿ ಅವರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದರು.
ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಕ್ರಿಕೆಟ್ ದೇವರು ಸಚಿನ್ ಅವರು ಕೂಡ ಮೈದಾನಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ವೃತ್ತಿ ಜೀವನದ 100ನೇ ಶತಕದ ಸನಿಹದಲ್ಲಿ ಇದ್ದ ಸಚಿನ್ 2011ರ ವಿಶ್ವಕಪ್ ವೇಳೆ 100ನೇ ಶತಕವನ್ನು ಗಳಿಸಲು ವಿಫಲರಾಗಿದ್ದರು. ಆದರೆ 2012ರಲ್ಲಿ ನಡೆದ ಏಷ್ಯಾ ಕಪ್‍ನ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತನ್ನ ನೂರನೇ ಶತಕ ಸಿಡಿಸಿ ಅಂದು ಮೈದಾನದಲ್ಲಿ ಭಾವುಕರಾಗಿದ್ದರು.
ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕಿಬ್-ಅಲ್-ಹಸನ್ ಕೂಡ ಮೈದಾನದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 2012 ಏಷ್ಯಾ ಕಪ್‍ನಲ್ಲಿ ಉತ್ತಮವಾಗಿ ಆಡಿದ್ದ ಬಾಂಗ್ಲಾ ದೇಶ ಫೈನಲ್ ತಲುಪಿತ್ತು. ಶ್ರೀಲಂಕಾ ಮತ್ತು ಇಂಡಿಯಾದಂತಹ ಪ್ರಬಲ ತಂಡಗಳಿಗೆ ಸೋಲುಣಿಸಿ ಫೈನಲ್‍ಗೇರಿದ್ದ ಬಾಂಗ್ಲಾ, ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವನ್ನು ಸೋತಿತ್ತು. ಈ ವೇಳೆ ಟೂರ್ನಿಯುದ್ದಕ್ಕೂ ಸೂಪರ್ ಆಗಿ ಆಡಿದ್ದ ಶಕಿಬ್ ಮೈದಾನದಲ್ಲಿ ಅತ್ತಿದ್ದರು. ಜೊತೆಗೆ ಬಾಂಗ್ಲಾದ ಇತರ ಆಟಗಾರರು ಕೂಡ ತಬ್ಬಿಕೊಂಡು ದುಃಖ ಪಟ್ಟಿದ್ದರು.