ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರಿಂದು ಬೆಂಗಳೂರು ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ನಿವಾಸಕ್ಕೆ ಆಗಮಿಸಿ ಎಸ್‌ಎಂಕೆಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಬೆಂಗಳೂರು, ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಜೊತೆಗೆ ಕ್ರೀಡೆಗೂ ತುಂಬಾ ಪ್ರೋತಾಹ ನೀಡುತ್ತಿದ್ದರು ಎಂದರು.ಇದನ್ನೂ ಓದಿ: 1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ
ಎಸ್‌ಎಂ ಕೃಷ್ಣ ಅವರ ಅಗಲಿಕೆ ರಾಜ್ಯಕ್ಕೆ ದು:ಖಕರವಾದ ಸಂಗತಿ. ನಾವೆಲ್ಲ ಕುಟುಂಬದ ರೀತಿ ಇದ್ದೇವು ಎಂದು ಸ್ಮರಿಸಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ಅವರಿಂದು (ಡಿ.10) ಬೆಳಗಿನ ಜಾವ ವಿಧಿವಶರಾದರು.ಇದನ್ನೂ ಓದಿ: ಹೈಟೆಕ್ ಜಿಮ್, ಸ್ಪಾ – ದೆಹಲಿ ಸಿಎಂ ನಿವಾಸ ʻಶೇಶ್ ಮಹಲ್ʼ ವೀಡಿಯೋ ಹರಿಬಿಟ್ಟ ಬಿಜೆಪಿ!