ಬೆಂಗಳೂರು: ಭಾರತ ತಂಡದ ನಾಯಕ, ರನ್ ಮಿಷನ್ ವಿರಾಟ್ ಕೊಹ್ಲಿಗೆ ಐಸಿಸಿ ವಿಶಿಷ್ಟ ಗೌರವ ನೀಡಿದೆ. ಐಸಿಸಿ ಪ್ರಕಟ ಮಾಡಿದ ವರ್ಷದ ಏಕದಿನ ತಂಡ ಮತ್ತು ಟೆಸ್ಟ್ ತಂಡಗಳಿಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದು, ಐಸಿಸಿ ಎರಡು ಕನಸಿನ ತಂಡಕ್ಕೆ ಕೊಹ್ಲಿ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ.
2019ರ ವರ್ಷದಲ್ಲಿ ಆಟಗಾರರು ತೋರಿದ ಪ್ರದರ್ಶನ ಪರಿಗಣಿಸಿ ಐಸಿಸಿ ತನ್ನ ಕನಸಿನ ತಂಡಕ್ಕೆ ಆಟಗಾರರನ್ನ ಆಯ್ಕೆ ಮಾಡಿಕೊಂಡು ತಂಡವನ್ನು ಪ್ರಕಟ ಮಾಡುತ್ತೆ. ಈ ಎರಡು ತಂಡಕ್ಕೆ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಇದಲ್ಲದೆ ಐಸಿಸಿ ಟೆಸ್ಟ್ ತಂಡದಲ್ಲಿ ಕರ್ನಾಟಕದ ಮಯಾಂಕ್ ಅಗರ್ ವಾಲ್ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಏಕದಿನ ತಂಡದಲ್ಲಿ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮೊಹಮದ್ ಶಮಿಗೆ ಸ್ಥಾನ ಸಿಕ್ಕಿದೆ. ಇಂಗ್ಲೇಂಡ್ ನ ಬೆನ್ ಸ್ಟ್ರೋಕ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಎರಡು ತಂಡದಲ್ಲಿ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Advertisement
Advertisement
ಐಸಿಸಿ ಕನಸಿನ ತಂಡ ಹೀಗಿದೆ:
ಐಸಿಸಿ ಟೆಸ್ಟ್ ತಂಡ ವಿರಾಟ್ ಕೊಹ್ಲಿ(ನಾಯಕ), ಮಯಾಂಕ್ ಅಗರ್ ವಾಲ್, ಟಾಮ್ ಲೇಥಮ್, ಸ್ಟೀವ್ ಸ್ಮಿತ್, ಬೆನ್ ಸ್ಟ್ರೋಕ್, ವ್ಯಾಟ್ಲಿಂಗ್(ಕೀಪರ್) ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೀಲ್ ವ್ಯಾಗ್ನರ್, ನಥನ್ ಲಯನ್. ಇದನ್ನೂ ಓದಿ: ಸ್ಮಿತ್ ಪರ ನಿಂತಿದ್ದ ಕೊಹ್ಲಿಗೆ ಸಿಕ್ತು ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ
Advertisement
ಐಸಿಸಿ ಏಕದಿನ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್, ಶಾಯ್ ಹೋಪ್, ಬಾಬರ್ ಅಜಂ, ಕೇನ್ ವಿಲಿಯಮ್ಸ್, ಬೆನ್ ಸ್ಟ್ರೋಕ್, ಜೋಸ್ ಬಟ್ಲರ್(ಕೀಪರ್) ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಮೊಹಮದ್ ಶಮಿ, ಕುಲ್ದೀಪ್ ಯಾದವ್.