ಮಡಿಕೇರಿ: ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ದೊಡ್ಡಮಳ್ತೆ ಗ್ರಾಮದ ಅಣ್ಣಯ್ಯಗೌಡ ಅವರ ಪುತ್ರ ಡಿ.ಎ.ಉದಯ(55) ಮೃತಪಟ್ಟವರು. ಭಾನುವಾರ ರಾತ್ರಿ ಟಿವಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದಾಗ ಭಾರತ ಸೋತ ಹತ್ತು ನಿಮಿಷದಲ್ಲೇ ಮನೆಯಲ್ಲೇ ತೀವ್ರವಾಗಿ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ – ಟ್ರೆಂಡಿಂಗ್ ಆದ ಜಯ್ ಶಾ
Advertisement
Advertisement
ತಕ್ಷಣ ಉದಯ ಅವರನ್ನು ಮನೆಯಲ್ಲಿ ಇದ್ದ ಕುಟುಂಬದ ಸದಸ್ಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆಮಾರ್ಗ ಮದ್ಯೆಯೇ ಉದಯ ಅವರು ಮೃತಪಟ್ಟಿರುವ ಬಗ್ಗೆ ಸೋಮವಾರಪೇಟೆ ಅಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!
Advertisement
ಟೀಂ ಇಡಿಯಾದ ಅಭಿಮಾನಿ ಹಾಗೂ ಕಾಫಿ ಬೆಳೆಗಾರರಾಗಿದ್ದ ಉದಯ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ಬೆಳಗ್ಗೆ ನೆರವೇರಿಸಲಾಗಿದೆ. ಇದನ್ನೂ ಓದಿ: ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು