ಹುಬ್ಬಳ್ಳಿ/ಧಾರವಾಡ: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ನಾಲ್ವರನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳು ಆಸ್ಟ್ರೇಲಿಯಾದ ಹಾಬರ್ಟ್ ಬೇಲ್ಲೇರಿವ್ ಒವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಸ್ ಲೀಗನ ಪಂದ್ಯಾವಳಿ ಪೈಕಿ ಹಾಬರ್ಟ್ ಹರಿಕೇನ್ಸ್ ಸ್ಕ್ಯಾಡ್ ಮತ್ತು ಪರ್ತ್ ಸ್ಕಾರ್ಚರ್ಸ್ ಸ್ಕ್ಯಾಡ್ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು.
Advertisement
Advertisement
ರನ್, ವಿಕೆಟ್ ಮತ್ತು ತಂಡದ ಒಟ್ಟಾರೆ ಮೊತ್ತದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಳೇ ಹುಬ್ಬಳ್ಳಿಯ ಕೊಳೇಕರ ಪ್ಲಾಟ್ ನ ನಿವಾಸಿ ಇಮ್ರಾನ್ ಮುಲ್ಲಾ ಶಿಮ್ಲಾ ನಗರದ ಬಿಡ್ಜ್ ಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು. ನಾಲ್ವರನ್ನ ವಶಕ್ಕೆ ಪಡೆದ ಪೊಲೀಸರು 7 ಮೊಬೈಲ್. 290 ರೂಪಾಯಿ ನಗದು, ರಜಿಸ್ಟರ್ ಬುಕ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನ ಜಪ್ತಿ ಮಾಡಿದ್ದಾರೆ.
Advertisement
ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement