ಬೆಂಗಳೂರು: ಟೋಲ್ ಎಂದಾಕ್ಷಣ ಅಲ್ಲಿ ದಾದಾಗಿರಿ, ಗೂಂಡಾಗಿರಿ, ಟ್ರಾಫಿಕ್ ಜಾಮ್ ಇನ್ನಿತರ ಸಮಸ್ಯೆಯಿಂದ ವಾಹನ ಸವಾರರು ಹೈರಾಣಗಿರುತ್ತಾರೆ. ಆದರೆ ಇವೆಲ್ಲವನ್ನ ಮೆಟ್ಟಿನಿಲ್ಲುವಂತೆ ಟೋಲ್ ಸಿಬ್ಬಂದಿಯೊಬ್ಬರ ಹುಟ್ಟು ಹಬ್ಬ ಆಚರಿಸಲು ಟೋಲ್ ಗೇಟ್ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನವಯುಗ ಟೋಲ್ ಸಿಬ್ಬಂದಿ ಟೋಲ್‍ಗೇಟ್ ದುರ್ಬಳಕೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ಸಿಬ್ಬಂದಿ ಗಂಗರಾಜು ಎಂಬವರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್‍ನಲ್ಲಿ ಸಿಬ್ಬಂದಿಯ ಹುಟ್ಟುಹಬ್ಬ ಆಚರಿಸಲು ಒಂದು ಟೋಲ್ ಲೈನ್ ಕ್ಲೋಸ್ ಮಾಡಿದ್ದಾರೆ.
Advertisement
Advertisement
ಸುಮಾರು ಒಂದು ಗಂಟೆಗಳ ಕಾಲ ಟೋಲ್ ಬಂದ್ ಮಾಡಿ ಸಿಬ್ಬಂದಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಟೋಲ್ ಸಿಬ್ಬಂದಿಗಳ ನಡೆಗೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಸಿಬ್ಬಂದಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv