ಬಾಲಿವುಡ್ (Bollywood) ಬೆಡಗಿ ಕೃತಿ ಸನೋನ್ (Kriti Sanon) ಸಿನಿಮಾ ವಿಚಾರ ಬಿಟ್ಟು ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಬಾಯ್‌ಫ್ರೆಂಡ್ ಜೊತೆ ಗ್ರೀಸ್‌ಗೆ ತೆರಳಿದ್ದಾರೆ. ಅಲ್ಲಿ ಸಿಗರೇಟ್ ಸೇದುತ್ತಾ ನಿಂತಿರುವ ಕೃತಿಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್ ಕಬೀರ್ ಬಹಿಯಾ ಮತ್ತು ಸಹೋದರಿ ನೂಪುರ್ ಜೊತೆ ಹುಟುಹಬ್ಬವನ್ನು ಕೃತಿ ಆಚರಿಸಿಕೊಂಡಿದ್ದಾರೆ. ನಟಿ ಕೃತಿ ಎನ್ನಲಾದ ಧೂಮಪಾನ ಮಾಡುತ್ತಾ ನಿಂತಿರುವ ಫೋಟೋ ಈಗ ಸದ್ದು ಮಾಡುತ್ತಿದೆ. ಇದನ್ನು ನೋಡಿ, ಮಾದರಿ ಆಗಬೇಕಾದವರೇ ಹೀಗೆ ಆದರೆ ಹೇಗೆ? ಎಂದು ನೆಟ್ಟಿಗರು ನಟಿಯನ್ನು ಟೀಕಿಸಿದ್ದಾರೆ.
ಕೆಲವರು ಇದು ಅವರ ಖಾಸಗಿ ವಿಚಾರ. ಅವರು ಹೊರದೇಶದಲ್ಲಿ ಏನೇ ಮಾಡಿದ್ರೂ ಅವರಿಗೆ ಬಿಟ್ಟ ವಿಚಾರ ಎಂದು ಫ್ಯಾನ್ಸ್ ನಟಿಯ ಪರ ವಹಿಸಿದ್ದಾರೆ. ಇದನ್ನೂ ನೋಡಿ:‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್
ಅಂದಹಾಗೆ, ಈ ಹಿಂದಿನ ಸಂದರ್ಶನವೊಂದರಲ್ಲಿ ನಾನು ಧೂಮಪಾನ ಮಾಡುವುದಿಲ್ಲ. ಸಿನಿಮಾದಲ್ಲಿನ ಪಾತ್ರಕ್ಕೆ ಅವಶ್ಯಕತೆ ಇದ್ದರೆ ಮಾಡುತ್ತೇನೆ ಎಂದು ಕೃತಿ ಹೇಳಿದ್ದರು. ಈಗ ವಿಡಿಯೋ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.