ಬಾಲಿವುಡ್ ಬೆಡಗಿ ಕೃತಿ ಸನೋನ್‌ಗೆ (Kriti Sanon) ಬಾಲಿವುಡ್‌ನಲ್ಲಿ ಬಂಪರ್ ಅವಕಾಶಗಳು ಬರುತ್ತಿವೆ. ಕಮ್ಮಿ ಸಿನಿಮಾ ಮಾಡಿದ್ರೂ ಕಥೆ ಹಾಗೂ ಪಾತ್ರಕ್ಕೆ ಪ್ರಾಮುಖ್ಯತೆ ಇರೋ ಸಿನಿಮಾದಲ್ಲಿ ಅವರು ನಟಿಸುತ್ತಾರೆ. ಸದ್ಯ ‘ಡಾನ್ 3’ (Don 3) ಸಿನಿಮಾದಲ್ಲಿ ಕೃತಿ ನಟಿಸಲಿದ್ದಾರೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ
‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ (Ranveer Singh) ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಜೋಡಿಯಾಗಿ ಈ ಹಿಂದೆ ಕಿಯಾರಾ ಅಡ್ವಾಣಿ ಆಯ್ಕೆ ಆಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರುವ ಹಿನ್ನೆಲೆ ಈ ಚಿತ್ರವನ್ನು ಕೈಬಿಟ್ಟರು. ಅವರ ಜಾಗಕ್ಕೆ ನಟಿ ಶಾರ್ವರಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಆದರೀಗ ಕೃತಿ ಸನೋನ್ ನಾಯಕಿ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:‘ನಾಗ್‌ಜಿಲ್ಲಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್- ಪೋಸ್ಟರ್ ಔಟ್
ಈಗಾಗಲೇ ಚಿತ್ರತಂಡ ಕೃತಿ ಅವರನ್ನು ‘ಡಾನ್ 3’ ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಈ ಚಿತ್ರಕ್ಕೆ ಅವರು ಓಕೆ ಎಂದ್ರಾ ಎಂಬುದು ಖಾತ್ರಿಯಾಗಿಲ್ಲ. ಈ ಬಗ್ಗೆ ಚಿತ್ರತಂಡ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾಯಬೇಕಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಅಂದಹಾಗೆ, ಕ್ರೀವ್, ದೋ ಪಾಟಿ ಸಿನಿಮಾ ಬಳಿಕ ಅವರು ತೇರೆ ಇಷ್ಕ್ ಮೈನ್, ಕಾಕ್‌ಟೈಲ್ 2 ಸಿನಿಮಾಗಳಲ್ಲಿ ಕೃತಿ ತೊಡಗಿಸಿಕೊಂಡಿದ್ದಾರೆ. ಕಾಕ್‌ಟೈಲ್ 2ನಲ್ಲಿ ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.