ನವದೆಹಲಿ: ಚಂದ್ರಯಾನ 2 ಯಶಸ್ಸಿಗೆ ಇಡೀ ದೇಶವೇ ಇಸ್ರೋಗೆ ಶುಭಹಾರೈಸಿದೆ. ಆದರೆ, ರಾಜಕೀಯದ ದುರ್ಗಂಧ ಇಲ್ಲೂ ಬಡಿದಿದೆ. ಇಸ್ರೋ ಸಾಧನೆಯ ಕುರಿತು ಶುಭಕೋರಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಗ್ಗೆ ತೆಗೆದಿದ್ದಂತೆ ಚಂದ್ರಯಾನ 2 ಬಗ್ಗೆಯೂ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
This is a good time to remember the visionary move of India’s first PM Pandit Jawaharlal Nehru to fund space research through INCOSPAR in1962 which later became ISRO. And also Dr. Manmohan Singh for sanctioning the #Chandrayan2 project in 2008. pic.twitter.com/2Tje349pa0
— Congress (@INCIndia) July 22, 2019
Advertisement
‘ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ. ಬಾಹ್ಯಾಕಾಶ ಸಂಶೋಧನೆಗೆ ನೆಹರು ಅವರು 1962ರಲ್ಲಿ, ಇನ್‍ಕಾಸ್‍ಪರ್ (IಓಅಔSPಂಖ) ಸ್ಥಾಪಿಸಿದರು. ನಂತರ ಇದೇ ಇಸ್ರೋ ಅಂತ ಮರುನಾಮಕರಣವಾಯಿತು. ಜೊತೆಗೆ, ಮನಮೋಹನ್ ಸಿಂಗ್ ಅವರು 2008ರಲ್ಲಿ ಚಂದ್ರಯಾನಕ್ಕೆ ಹಣಕಾಸು ಬಿಡುಗಡೆ ಮಾಡಿದ್ದರು’ ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದೆ.
Advertisement
भारत के लिए यह एक ऐतिहासिक क्षण है।
चंद्रयान-2 के सफल प्रक्षेपण से आज पूरा देश गौरवान्वित है।
मैंने थोड़ी देर पहले ही इसके लॉन्च में निरंतर तन-मन से जुटे रहे वैज्ञानिकों से बात की और उन्हें पूरे देश की ओर से बधाई दी। #Chandrayaan2 https://t.co/50UodlbH0y
— Narendra Modi (@narendramodi) July 22, 2019
Advertisement
ಇತ್ತ ಪ್ರಧಾನಿ ಮೋದಿ ಅವರು ತಮ್ಮ ಕಚೇರಿಯಲ್ಲೇ ಚಂದ್ರಯಾನ 2 ಉಡಾವಣೆಯ ನೇರ ಪ್ರಸಾರ ವೀಕ್ಷಿಸಿದ್ರು. ಮಿಷನ್ ಮೂನ್‍ನಿಂದ ಚಂದ್ರನ ಮೇಲಿನ ಹೊಸ ಜ್ಞಾನ ಸಂಪಾದನೆಗೆ ಜಗತ್ತಿಗೇ ಅನುಕೂಲವಾಗಲಿದೆ ಎಂದು ವರ್ಣಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಟ್ವೀಟಿಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಕೀಳುಮಟ್ಟದ ಹೇಳಿಕೆ ನೀಡಿ ಬಾಹ್ಯಾಕಾಶ ಯೋಜನೆಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.