ಬೆಂಗಳೂರು: ಏರೋಸ್ಪೇಸ್ (Aerospace) ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ (Karnataka) ಸಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಭಾನುವಾರ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023ರ (Aero India 2023) ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಏರೋಸ್ಪೇಸ್ ನೀತಿ ಹಾಗೂ ರಕ್ಷಣಾ ಪಾರ್ಕ್‌ನ ಮೊದಲ ಹಂತ ಪೂರ್ಣಗೊಂಡಿದೆ. 2ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು (Bengaluru) ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ (Air Show) ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ. ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಸ್ವಂತ ಏರ್‌ಕ್ರಾಫ್ಟ್ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು, ಈ ದೇಶದ ಭವಿಷ್ಯಕ್ಕೆ ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ ಎಂದರು.
Advertisement
Advertisement
ಗೌರವದ ಸಂಕೇತ:
ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜನೆ ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು ಎಂದರು.
Advertisement
ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ:
ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ, ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು 2 ವರ್ಷಗಳ ಹಿಂದೆ ಏರ್ ಶೊ ಯಶಸ್ವಿಯಾಗಿ ಜರುಗಿಸಿದ್ದೇವೆ. ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ಅತ್ಯಂತ ದೊಡ್ಡ ಏರ್ ಶೋ ಆಗಿದ್ದು, ಅತಿ ಹೆಚ್ಚು ವಿದೇಶಿ ರಕ್ಷಣಾ ಮಂತ್ರಿಗಳು, ಏರ್‌ಪೋರ್ಸ್ ಸಿಇಒಗಳು, 35,000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ, 67 ವಸ್ತು ಪ್ರದರ್ಶನ, 600 ರಿಂದ 809ಗೆ ಪ್ರದರ್ಶನಗಳು, 98 ವಿದೇಶಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಒಪ್ಪಂದಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.
Advertisement
ವಾಯುಪಡೆಯ ಬಲವರ್ಧನೆ:
ವಾಯುಪಡೆಯ ತಂತ್ರಜ್ಞಾನ, ಸಾಮರ್ಥ್ಯ, ಮಾನವ ಸಂಪನ್ಮೂಲ ಬಲಪಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ರಾಜನಾಥ್ ಸಿಂಗ್ ಅವರ ನಾಯಕತ್ವದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ, ತಂತ್ರಜ್ಞಾನ ಮೇಲ್ದರ್ಜೆಗೇರುವಲ್ಲಿ ಭಾರತ ಆತ್ಮ ನಿರ್ಭರವಾಗುತ್ತಿದೆ. ನಮ್ಮ ರಕ್ಷಣಾ ಉಪಕರಣಗಳನ್ನು ಶೇ.75 ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು, ಈಗ ರಪ್ತು ಮಾಡುತ್ತಿದ್ದೇವೆ. ಏರೋಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940 ರಲ್ಲಿ ಹೆಚ್‌ಎಎಲ್ ಸ್ಥಾಪನೆಯಾಗಿದ್ದು, ಎನ್‌ಎಎಲ್, ಬಿಹೆಚ್‌ಇಎಲ್, ಡಿಆರ್‌ಡಿಒ ಎಲ್ಲವೂ ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ
1960 ರಲ್ಲಿ ಬೆಂಗಳೂರಿನಲ್ಲಿ ಇಸ್ರೋ ಆರಂಭವಾಯಿತು. ಪ್ರತಿ ದಶಕದಲ್ಲಿ ಏರೋಸ್ಪೇಸ್ ಅಭಿವೃದ್ಧಿಯಾಗಿದೆ. ಸ್ಥಳ, ಸಾಮರ್ಥ್ಯ, ವೃದ್ಧಿಯಾಗಿದೆ. 1960 ಆರ್ಯಭಟ ಉಪಗ್ರಹ ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ.67 ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಿಂದ ಉತ್ಪಾದನೆಯಾಗುತ್ತದೆ ಎಂದರು.
ಏರೋ ಇಂಡಿಯಾ ಶೋ 2023ನ್ನು ಜನರು ನೆನಪಿನಲ್ಲಿಡುತ್ತಾರೆ ಅಲ್ಲದೇ ಇಲ್ಲಿಂದ ಒಳ್ಳೆಯ ನೆನಪುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ವಿಶ್ವಾಸವಿದ್ದು, ಏರೋಸ್ಪೇಸ್ ಹಾಗೂ ರಕ್ಷಣಾ ಉದ್ಯಮದ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ. ಅರ್ಧ ಜಗತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಇಡೀ ವಿಶ್ವವೇ ನಮ್ಮ ಕಡೆ ನೋಡುವಂತಾಗಬೇಕು ಎಂದು ಆಶಿಸಿದರು.
14ನೇ ಬಾರಿ ಏರೋ ಇಂಡಿಯಾ ಶೋ ಆಯೋಜನೆ ಮಾಡಲು ನಮಗೆ ಈ ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು. ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಅಜಯ್ ಭಟ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗಿರಿಧರ್, ಎಸಿಎಸ್ ರಮಣ ರೆಡ್ಡಿ, ನಟರಾಜನ್, ಅನುರಾಗ್ ಬಾಜಪೇಯಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ದಲಿತಪರ ಸಂಘಟನೆಯಿಂದ ಜೈನ್ ವಿವಿ ಬೋರ್ಡ್‌ಗೆ ಮಸಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k