ಮಂಡ್ಯ: ಕಳೆದ ಹಲವು ದಿನಗಳಿಂದ ಒಂದಲ್ಲ ಒಂದು ಕಾರಣಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹಾಗೂ ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ನಡುವೆ ಟಾಕ್‌ಫೈಟ್ ನಡೆಯುತ್ತಲೆ ಇದೆ.
ಮುಂದುವರಿದು ಅಭಿವೃದ್ಧಿ ಕಾರ್ಯಕ್ರಮಗಳ ಕ್ರೆಡಿಟ್ ಪಡೆಯಲು ಪೈಪೋಟಿಗೆ ಬಿದ್ದಿದ್ದ ಉಭಯ ನಾಯಕರು ಶ್ರೀರಂಗಪಟ್ಟಣ-ಜೇವರ್ಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎರಡೆರಡು ಬಾರಿ ಗುದ್ದಲಿ ಪೂಜೆ ಮಾಡಿ ಸುದ್ದಿಯಾಗಿದ್ರು. ಆದ್ರೀಗ ಕ್ರೆಡಿಟ್ ವಾರ್ ಮೈತ್ರಿ ನಾಯಕರು ನಡುವೆ ಶುರುವಾಗಿದ್ದು. ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ಮಾಜಿ ಸಚಿವ ಕೆ.ಸಿ ನಾರಾಯಣಗೌಡ (KC Narayanagowda) ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗರೂ ಜಟಾಪಟಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ: ರಾಹುಲ್ ಗಾಂಧಿ
ಅಂದಹಾಗೇ ಕೆಸಿಎನ್ ಹಾಗೂ ಹೆಚ್‌ಡಿಕೆ ಬೆಂಬಲಿಗರ ನಡುವಿನ ಈ ಕ್ರೆಡಿಟ್ ಫೈಟ್‌ಗೆ ಕಾರಣವಾಗಿರೋದು ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿ. ಈ ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಹೆಚ್.ಡಿ ಕುಮಾರಸ್ವಾಮಿ ಮನವಿ ಸಲ್ಲಿಸಿದ್ರು. ಈ ಬಗ್ಗೆ ಜೆಡಿಎಸ್ ಸೋಷಿಯಲ್ ಮೀಡಿಯಾಗಳಲ್ಲೂ ಪೋಸ್ಟ್ ಹಾಕಲಾಗಿತ್ತು. ಇದರಿಂದ ಕೆರಳಿ ಕೆಂಡವಾದ ಕೆ.ಸಿ ನಾರಾಯಣಗೌಡ ಬೆಂಬಲಿಗರು, ಹೆಚ್ಡಿಕೆಗೂ ಮೊದಲೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡರು ನಿತಿನ್ ಗಡ್ಕರಿ ಬಳಿ ಚರ್ಚಿಸಿದ್ದಾರೆ. ಭಾರತ್ ಮಾಲಾ ಯೋಜನೆಯಡಿ ಶ್ರೀರಂಗಪಟ್ಟಣ-ಅರಸೀಕೆರೆ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ನೋಂದಣಿ ಸಹ ಆಗಿದೆ. ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ನಾರಾಯಣಗೌಡರ ಪಾತ್ರ ಮಹತ್ವದ್ದಾಗಿದೆ ಎಂದು ಈ ಹಿಂದೆ ನಾರಾಯಣಗೌಡರು ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ್ದ ದಾಖಲೆ ಬಿಡುಗಡೆ ಮಾಡಿದ್ದಾರೆ.
ಒಟ್ಟಾರೆ ಅಭಿವೃದ್ಧಿ ಕಾರ್ಯಕ್ರಮಗಳ ಕ್ರೆಡಿಟ್ ಪಡೆಯಲು ಮಂಡ್ಯದ ಜನಪ್ರತಿನಿಧಿಗಳು ತಾ ಮುಂದು ನಾ ಮುಂದು ಎನ್ನುತ್ತಿದ್ದು. ಮಂಡ್ಯ ಜನ ಮಾತ್ರ ಯಾರಾದ್ರು ಹೆಸರು ತಗೋಳ್ಳಿ ಅಭಿವೃದ್ಧಿ ಮಾಡಿ ಅಂತಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್