ನವದೆಹಲಿ: ಎಸ್‌ಸಿ-ಎಸ್‌ಟಿ (SC-ST) ಒಳಮೀಸಲಾತಿ ಮತ್ತು ಕೆನೆಪದರ (Creamy Layer) ಮೀಸಲಾತಿ ಜಾರಿ ಸಂಬಂಧ ಇತ್ತೀಚಿಗೆ ಸುಪ್ರೀಂ ಕೋರ್ಟ್ (Supreme Court) ತೀರ್ಪಿನ ವಿಚಾರವಾಗಿ ನೂರಕ್ಕೂ ಹೆಚ್ಚು ಸಂಸದರು, ಪ್ರಧಾನಿಯನ್ನು ಭೇಟಿ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕೆನೆಪದರ ಮೀಸಲಾತಿಯನ್ನು ಜಾರಿ ಮಾಡಬಾರದು. ಇದರಿಂದ ಅನ್ಯಾಯ ಆಗುತ್ತೆ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್ ಸಿಸೋಡಿಯಾ
ಪ್ರಧಾನಿ ಮೋದಿ ಭೇಟಿ ಬಳಿಕ ಮಾತನಾಡಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಯಾವುದೇ ಕಾರಣಕ್ಕೂ ಕೆನೆಪದರ ಮಿಸಲಾತಿ ಜಾರಿ ಮಾಡಲ್ಲ. ಅನುಷ್ಠಾನಕ್ಕೆ ತರಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೆನೆಪದರ ಮೀಸಲಾತಿ ಜಾರಿ ಮಾಡಬಾರದು. ಅದರಿಂದ ಅನ್ಯಾಯ ಆಗುತ್ತೆ ಎಂದಿದ್ದೇನೆ. ಯಾವುದೇ ಕಾರಣಕ್ಕೂ ಕೆನೆಪದರ ಮೀಸಲಾತಿ ಜಾರಿ ಮಾಡಲ್ಲ. ಅನುಷ್ಠಾನಕ್ಕೆ ತರಲ್ಲ ಎಂದು ಮೋದಿ ಹೇಳಿದ್ದಾರೆ. ಇಂದು ಕೂಡ ಮನೆ ಬಾಡಿಗೆ ಕೊಡುವಾಗದ ಜಾತಿ ಕೇಳುತ್ತಾರೆ. ಕೆನೆಪದರ ಮೀಸಲಾತಿ ಪರವಾಗಿ ನಾವು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ವಯನಾಡು ಭೂಕುಸಿತ ಪ್ರದೇಶಕ್ಕೆ ನಾಳೆ ಮೋದಿ ಭೇಟಿ