ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ರಾಜಾಜಿನಗರದ ಅವರ ಮನೆ ಮುಂದೆ ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸದ್ಯ ಅಭಿಮಾನಿಗಳು ಕೈಯಲ್ಲಿ ಗುಲಾಬಿ ಹೂ ಹಿಡಿದು ಪ್ರೇಮಲೋಕದ ಸೃಷ್ಟಿಕರ್ತನಿಗಾಗಿ ಕಾದು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
‘ಪಡ್ಡೆ ಹುಲಿ’ ಚಿತ್ರ ತಂಡದ ಸದಸ್ಯರು ರವಿಚಂದ್ರನ್ ಜನ್ಮದಿನದಂದು ಕೇಕ್ ಕಟ್ ಮಾಡಿ ಆಚರಣೆ ಮಾಡಿದ್ದಾರೆ. ಇನ್ನೂ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಪಡ್ಡೆ ಹುಲಿ ಚಿತ್ರತಂಡ ಅವರ ಪಾತ್ರದ ಮೋಷನ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ.
Advertisement
ಇದೇ ವೇಳೆ ಮಾತನಾಡಿದ ರವಿಚಂದ್ರನ್, “ಅಭಿಮಾನಿಗಳಿಗೋಸ್ಕರ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಈಗ ಅಭಿಮಾನಿಗಳಿಗೋಸ್ಕರ 4 ಗಂಟೆ ನಿಂತ್ಕೊಂಡು ಬೇಕಾದರೂ ಫೋಟೋ ತೆಗಿಸಿಕೊಳ್ಳುತ್ತೀನಿ. ಈ ವರ್ಷ ಮತ್ತೆ ರಣಧೀರನನ್ನು ನೋಡ್ತೀರ. ಈ ಹಿಂದೆ ಮಂಜಿನ ಹನಿಯಿಂದ ದುಡ್ಡು ಕಳೆದುಕೊಂಡೆ. ಈಗ ಹೊಸ ಕಾನ್ಸೆಪ್ಟ್ ಜೊತೆ ಬರ್ತೀನಿ” ಎಂದು ಹೇಳಿದ್ದಾರೆ.
Advertisement
Advertisement
ನನ್ನ ಹುಟ್ಟುಹಬ್ಬಕ್ಕೆ ಮಗಳು ಗಾಗಲ್ ಗಿಫ್ಟ್ ನೀಡಿದ್ದು, ನನ್ನಲ್ಲಿರುವ ಕ್ರೇಜಿ ಹೊರಬರಲಿ ಎಂದು ಗಂಡು ಮಕ್ಕಳು ಇಬ್ಬರು ಕ್ರೇಜಿ ಎಂದು ಇರುವ ಶರ್ಟ್ ಡಿಸೈನ್ ಮಾಡಿಕೊಟ್ಟಿದ್ದಾರೆ. ಮಗಳು ಗಿಫ್ಟ್ ಕೊಟ್ಟಿರೋದರಿಂದ ಪ್ರೀತಿಯಿಂದ ಹೋಟೆಲ್ ಒಳಗಡೆಯೇ ಹಾಕಿದ್ದೇನೆ. ಈಗ ಹಾಕಿರುವ ಶರ್ಟ್ ಕೂಡ ಮಕ್ಕಳೇ ನೀಡಿದ್ದು. ಇಲ್ಲಿ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡ ನಂತರ ಫ್ಯಾಮಿಲಿ ಜತೆ ಗೋವಾಗೆ ತೆರಳುತ್ತಿದ್ದೇನೆ. ನನ್ನ ತಂದೆಯ ಜತೆ ಸೇರಿ ಮಾಡಿದ ಬರ್ತಡೇ ನನಗೆ ಮರೆಯೋದಕ್ಕೆ ಸಾಧ್ಯವಿಲ್ಲ ಎಂದು ರವಿಚಂದ್ರನ್ ತಿಳಿಸಿದ್ದಾರೆ.
Advertisement
ರಾಜೇಂದ್ರ ಪೊನ್ನಪ್ಪ ಕ್ಲಾಸು ಮತ್ತು ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ. ಈ ವರ್ಷ ನೀವು ಮತ್ತೆ ನನ್ನಲಿರುವ ರಣಧೀರನನ್ನ ನೋಡ್ತಿರ. ರಾಜೇಂದ್ರ ಪೊನ್ನಪ್ಪ 50 ಕೋಟಿ ಕಲೆಕ್ಷನ್ ಮಾಡಿದ್ರೆ ಮಂಜಿನ ಹನಿ ಶುರುಮಾಡುತ್ತೇನೆ. ಅದನ್ನ ಮಾಡಲು ನನ್ನ ಬಳಿ ಹಣವಿಲ್ಲ. ಈಗಾಗಲೇ ಮಂಜಿನ ಹನಿಗಾಗಿ 8 ಕೋಟಿ ಕಳೆದುಕೊಂಡಿದ್ದೀನಿ ಎಂದು ತಿಳಿಸಿದ್ದಾರೆ.
ನಾನು ಅಭಿಮಾನಿಗಳಿಗಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ದೂರದ ಊರುಗಳಿಂದ ಅಭಿಮಾನಿಗಳು ಬಂದಿದ್ದಾರೆ. ಅವರು ಬಂದು ಅಷ್ಟೇ ಸೇಫ್ ಆಗಿ ಹೋಗಬೇಕು. ನಾನು ಅಂಬರೀಶ್ ಕದಿಮ ಕಳ್ಳರು ಟೈಮಲ್ಲಿ ಒಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸುತ್ತಿದ್ದೀವಿ. ಈ ಬಾರಿ ತಿರುಪತಿ ಗೆ ಹೋಗಲು ಆಗಲಿಲ್ಲ ಹಾಗಾಗಿ ಈ ಬಾರಿ ಅಲ್ಲಿಂದ ಲಡ್ಡು ತರಿಸಿದ್ದೇನೆ ಎಂದು ರವಿಚಂದ್ರನ್ ಹೇಳಿದರು. ಇದನ್ನೂ ಓದಿ: 57ನೇ ವಸಂತಕ್ಕೆ ಕಾಲಿಟ್ಟ ಪ್ರೇಮಲೋಕದ ಸೃಷ್ಠಿಕರ್ತ- ಪಡ್ಡೆ ಹುಲಿ ಚಿತ್ರದಿಂದ ಸಿಕ್ತು ವಿಶೇಷ ಉಡುಗೊರೆ!