ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ತಮ್ಮ 58ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಕಲಾವಿದರು ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಹೇಳಿದ್ದಾರೆ.
ರವಿಚಂದ್ರನ್ ಅವರು ಮೇ 28 ಹಾಗೂ 29ರಂದು ತಮ್ಮ ಮಗಳ ಮದುವೆಯನ್ನೂ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮಗಳ ಮದುವೆ ಸಂಭ್ರಮ ಮುಗಿಯುವುದರಲ್ಲೇ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸದ್ಯ ನಟರಾದ ದರ್ಶನ್, ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ತರುಣ್ ಸುದೀರ್ ಅವರು ರವಿಚಂದ್ರನ್ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
Advertisement
ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ ???? pic.twitter.com/rkA6MtKzJj
— Darshan Thoogudeepa (@dasadarshan) May 30, 2019
Advertisement
ಚಾಲೆಂಜಿಂಗ್ ದರ್ಶನ್ ಅವರು ರವಿಚಂದ್ರನ್ ಅವರ ಜೊತೆ ಇರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. “ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿಸ್ಟಾರ್ ರವಿ ಸರ್‍ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ” ಎಂದು ದರ್ಶನ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ಕೂಡ, “ಕನ್ನಡ ಸಿನಿಮಾರಂಗದ ‘ಶೋ ಮ್ಯಾನ್’ಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಶುಭ ಕೋರಿದ್ದಾರೆ.
Advertisement
ಕ್ರೇಜಿ ಸ್ಟಾರ್, ಕನಸುಗಾರ, ಪ್ರೇಮಲೋಕದ ಸರದಾರ ವಿ.ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು #HappybirthdayCrazyStar #Ravichandran #may301961 #Ravichandran58thBirthday pic.twitter.com/FrQhMBL3GJ
— Upendra (@nimmaupendra) May 30, 2019
Advertisement
ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ, “ಕ್ರೇಜಿ ಸ್ಟಾರ್, ಕನಸುಗಾರ, ಪ್ರೇಮಲೋಕದ ಸರದಾರ ವಿ. ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಉಪೇಂದ್ರ ಪತ್ನಿ, ಪ್ರಿಯಾಂಕಾ ಉಪೇಂದ್ರ ಅವರು ಕೂಡ “ಹುಟ್ಟುಹಬ್ಬದ ಶುಭಾಶಯಗಳು ರವಿ ಸರ್” ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
Happy birthday Ravi Sir..Lots of love and best wishes! pic.twitter.com/89W7Fufr1D
— Priyanka Upendra (@priyankauppi) May 30, 2019
ಮೇ 29 ಹಾಗೂ 29 ನನ್ನ ಮಗಳ ಮದುವೆ ಇದ್ದು, ಮೇ 30ರಂದು ನನ್ನ ಹುಟ್ಟುಹಬ್ಬ ಇದೆ. ಈ ಬಾರಿ ಹುಟ್ಟುಹಬ್ಬ ಆಚರಿಸಲು ನಾನು ಇರುವುದಿಲ್ಲ. ಏಕೆಂದರೆ ನನ್ನ ಮಗಳ ಮದುವೆ ವಿಷಯದಲ್ಲಿ ಸಂಭ್ರಮದಲ್ಲಿ ನಾನು ಊರಿನಿಂದ ಬಂದ ಸಂಬಂಧಿಕರ ಜೊತೆ ಇರುತ್ತೇನೆ. ಹಾಗಾಗಿ ಯಾರೂ ನನ್ನ ಹುಟ್ಟುಹಬ್ಬದಂದು ಮನೆಯ ಬಳಿ ಬರುವುದು ಬೇಡ. ಮುಂದಿನ ವರ್ಷ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸೋಣ. ನನ್ನನ್ನು ಕ್ಷಮಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.