ಫೆ.7ರಂದು ಅದ್ಧೂರಿಯಾಗಿ ನಡೆಯಲಿದೆ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಮದುವೆ

Public TV
1 Min Read
rakshitha prem

ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshitha Prem) ಸಹೋದರ ರಾಣಾ (Raannna) ಅವರು ದಾಂಪತ್ಯ ಜೀವನದಲ್ಲಿ ಕಾಲಿಡಲು ಸಜ್ಜಾಗಿದ್ದಾರೆ. ಫೆ.7ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಭಾಗಿಯಾದ ‘ಕೆಜಿಎಫ್ 2’ ಕ್ವೀನ್‌

rakshitha prem 1

ಇದೇ ಫೆ.7 ಮತ್ತು 8ರಂದು ಬೆಂಗಳೂರಿನ ‘ಮುಕ್ತ ಚಾಮರ ವಜ್ರ’ ಪ್ಯಾಲೇಸ್ ಗ್ರೌಂಡ್‌ನಲ್ಲಿ ರಾಣಾ ಮದುವೆ ಜರುಗಲಿದೆ. ವಿಶೇಷ ಅಂದರೆ, ರಾಣಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೂಡ ರಕ್ಷಿತಾ. ರಾಣಾ ಹಾಗೂ ರಕ್ಷಿತಾ (Rakshitha) ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

raanna

ಕಾಮನ್ ಫ್ರೆಂಡ್ ಮೂಲಕ ರಕ್ಷಿತಾ ಅವರು ರಾಣಾಗೆ ಪರಿಚಯ ಆದರು. ಒಂದೊಳ್ಳೆಯ ಫ್ರೆಂಡ್‌ಶಿಪ್ ಇಬ್ಬರ ನಡುವೆ ಇತ್ತು. ರಕ್ಷಿತಾರನ್ನು ಮೆಚ್ಚಿ ರಾಣಾ ಅವರೇ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಇದೀಗ 7 ವರ್ಷಗಳ ಬಂಧಕ್ಕೆ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ.

ಅಕ್ಕ ರಕ್ಷಿತಾರಂತೆ ತಾವು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಎಂದು ರಾಣಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ‘ಏಕ್ ಲವ್ ಯಾ’ ಚಿತ್ರ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 2022ರಲ್ಲಿ ತೆರೆಕಂಡ ಈ ಸಿನಿಮಾಗೆ ಭಾವ ಪ್ರೇಮ್ ಅವರೇ ನಿರ್ದೇಶನ ಮಾಡಿದ್ದರು.

Share This Article