ಚೆನ್ನೈ: ದೇವಾಲಯದ ಉತ್ಸವದ (Temple Festival) ವೇಳೆ ಕ್ರೇನ್ (Crane) ಒಂದು ಕುಸಿದು ಬಿದ್ದು ನಾಲ್ವರು ದುರ್ಮರಣ ಹೊಂದಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.
ತಮಿಳುನಾಡಿನ ರಾಣಿಪೇಟೆಯಲ್ಲಿರುವ ದ್ರೌಪತಿ ದೇವಾಲಯದಲ್ಲಿ ಅಪಘಾತ ವರದಿಯಾಗಿದೆ. ಭಾನುವಾರ ಸಂಜೆ ಕ್ರೇನ್ ಕುಸಿದು ಬಿದ್ದಿದ್ದರಿಂದ ನೆರೆದಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. 5 ಜನರು ಗಾಯಗೊಂಡಿದ್ದಾರೆ.
Advertisement
Three killed when a crane crashed in temple fest in Keezhveedhi village near Nemili, Arakonam, #TamilNadu @dt_next @CMOTamilnadu @tnpoliceoffl @PKSekarbabu pic.twitter.com/pstwc6BpLC
— Raghu VP / ரகு வி பி / രഘു വി പി (@Raghuvp99) January 22, 2023
Advertisement
ವರದಿಗಳ ಪ್ರಕಾರ, ಪೊಂಗಲ್ ಬಳಿಕ ನಡೆಯುವ ದ್ರೌಪತಿ ಅಮ್ಮನವರ ಹಬ್ಬದ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ದೇವಿಯ ವಿಗ್ರಹವನ್ನು ಹೊತ್ತಿದ್ದ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ. ಕ್ರೇನ್ ನೆಲಕ್ಕಪ್ಪಳಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ
Advertisement
ಕ್ರೇನ್‌ನ ಒಂದು ಭಾಗ ಎತ್ತರದ ಪ್ರದೇಶದಲ್ಲಿದ್ದು, ನೆಲದ ಅಸಮತೋಲನದಿಂದಲೇ ಅದು ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕ್ರೇನ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ತಿಳಿಸಿದ್ದಾರೆ.
Advertisement
ದೇವಾಲಯದ ಉತ್ಸವದಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಅಥವಾ ಸೂಚನೆ ಇರಲಿಲ್ಲ. ಇದು ಖಾಸಗಿ ದೇವಾಲಯವಾಗಿದೆ ಎಂದು ಪಾಂಡಿಯನ್ ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k