ಬೀಜಿಂಗ್: ಅಪಘಾತವಾಗಿ ಬಸ್ಸೊಂದು ನದಿಗೆ ಬಿದ್ದ ನಂತರ ಅದೇ ರಸ್ತೆಯಲ್ಲಿದ್ದ ಕ್ರೇನ್ ಚಾಲಕ ಪ್ರಯಾಣಿಕರನ್ನ ಪಾರು ಮಾಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
Advertisement
ಜನವರಿ 3ರಂದು ಜಿಯಾಂಗ್ಸು ಪ್ರಾಂತ್ಯದ ಚಾಂಗ್‍ಝೌನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾಧ್ಯಮವೊಂದು ಘಟನೆಯ ವಿಡಿಯೋವನ್ನ ಪೋಸ್ಟ್ ಮಾಡಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಹಾನಿಯಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹೋಗಿದೆ. ಅತ್ತ ಬಸ್ ಕಾರ್ ಡಿಕ್ಕಿಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ನದಿಯ ಕಡೆ ಚಲಿಸಿದ್ದು, ನೀರಿನೊಳಗೆ ಬಿದ್ದಿದೆ.
Advertisement
Advertisement
ಅದೇ ರಸ್ತೆಯ ಮತ್ತೊಂದು ಬದಿಯಲ್ಲಿ ತನ್ನ ಕ್ರೇನ್ ನಿಲ್ಲಿಸಿಕೊಂಡಿದ್ದ ಚಾಲಕ ಇದನ್ನ ಗಮನಿಸಿದ್ದಾರೆ. ಥಟ್ಟಂತ ಕ್ರೇನ್‍ನಿಂದ ಇಳಿದು ಬಸ್ ಬಿದ್ದ ನದಿಯತ್ತ ಓಡಿದ್ದಾರೆ.
Advertisement
ನಂತರ ವಾಪಸ್ ಬಂದು ಕ್ರೇನ್ ತೆಗೆದುಕೊಂಡು ಹೋಗಿ ಪ್ರಯಾಣಿಕರನ್ನ ಬಸ್‍ನಿಂದ ಮೇಲೆತ್ತಿ ಕಾಪಾಡಿದ್ದಾರೆ.
ಇಲ್ಲಿನ ಮಾಧ್ಯಮವೊಂದರ ವರದಿಯ ಪ್ರಕಾರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ ಎಲ್ಲಾ ಪ್ರಯಾಣಿಕರು ಹಾಗೂ ಬಸ್ ಚಾಲಕನನ್ನು ಕ್ರೇನ್ ಚಾಲಕ ಅಪಾಯದಿಂದ ಪಾರು ಮಾಡಿದ್ದರು.
ಬಸ್‍ಗೆ ಡಿಕ್ಕಿ ಹೊಡೆದ ಕಾರ್ ಕೂಡ ತಲೆಕೆಳಗಾಗಿ ಬಿದ್ದಿದ್ದು, ಕಾರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.