ಬಹುತೇಕ ವಯಸ್ಕರು ಮತ್ತು ಮಕ್ಕಳಲ್ಲಿ ಈ ಒಡೆದ ಹಿಮ್ಮಡಿಯು ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಒಡೆದ ಹಿಮ್ಮಡಿಗೆ ಮನೆಯಲ್ಲಿಯೇ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ನಾವು ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದೇವೆ.ಮನೆಯಲ್ಲಿಯೇ ನಿಮ್ಮ ಪಾದಗಳಿಗೆ ಆರೈಕೆ ಮಾಡಿಕೊಳ್ಳುವುದರಿಂದ ಅಂದವಾದ ಪಾದಗಳುನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
Advertisement
* ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿ. ಇದು ಚರ್ಮವನ್ನು ಮೃದುವಾಗಿಸುವ ಸುಲಭವಾದ ಮಾರ್ಗವಾಗಿದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
Advertisement
* ತೆಂಗಿನ ಎಣ್ಣೆ, ಆಲಿವ್ ಎಣ್ಣೆಗಳಂತಹ ತೈಲಗಳಿಂದ ಒಡೆದ ಹಿಮ್ಮಡಿಗಳಿಗೆ ಮಸಾಜ್ ಮಾಡಿದರೆ ಹಿಮ್ಮಡಿಗಳು ಕೋಮಲವಾಗುತ್ತವೆ.
Advertisement
Advertisement
* ನಿಮ್ಮ ಒಡೆದ ಹಿಮ್ಮಡಿಗೆ ಪರೋಕ್ಷವಾದ ಕಾರಣ ಪಾದರಕ್ಷೆಗಳು ಕೂಡ ಹೌದು. ನಿಮ್ಮ ಪಾದಗಳಿಗೆ ಹೊಂದಾಣಿಕೆಯಲ್ಲದ ಪಾದರಕ್ಷೆಗಳನ್ನು ನೀವು ಬಳಸಿದಾಗ ಹಿಮ್ಮಡಿಗಳು ಒಡೆಯುತ್ತವೆ. ಇಂತಹ ಪಾದರಕ್ಷೆಗಳು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ
* ಮಾರುಕಟ್ಟೆಯಲ್ಲಿ ಸಾಕಷ್ಟು ಮಾಯಿಶ್ಚರೈಸರ್ ದೊರೆಯುತ್ತವೆ. ಅವುಗಳಲ್ಲಿ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಅನ್ನು ಪ್ರತಿನಿತ್ಯ ಬಳಸಿ.
* ಪಾದಗಳನ್ನು ಆಗಾಗ ನೀರಿನಿಂದ ತೊಳೆಯುತ್ತಿರಬೇಕು. ಹೊರಗೆ ಓಡಾಡುವಾಗ ಸಾಕ್ಸ್ ಧರಿಸಿ ಹೋಗಬೇಕು.