ಬೆಂಗಳೂರು: ಚೋಳರಪಾಳ್ಯ ಪಾದರಾಯನಪುರದ ರೈಲ್ವೇ ಸೇತುವೆಯಲ್ಲಿ ದೊಡ್ಡ ಬಿರುಕು ಮೂಡಿದ್ದು, ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ.
ದಿನಕ್ಕೆ ಲಕ್ಷಾಂತರ ಜನರು ವಾಹನದ ಮೂಲಕ ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ ಪೈಪ್‍ಲೈನ್, ಹೊಸಹಳ್ಳಿ, ಜೆಜೆಆರ್ ನಗರ, ಕೆಪಿ ಅಗ್ರಹಾರಕ್ಕೆ ಈಗ ಮಾರ್ಗವಾಗಿಯೇ ಸಾಗುತ್ತಿದ್ದಾರೆ.
ಹಳೆಯ ಕಾಲದ ಸೇತುವೆ ಇದಾಗಿದ್ದು, ಈಗ ಕೆಳಭಾಗದಿಂದ ಸಂಪೂರ್ಣ ಶಿಥಿಲಗೊಂಡು ದೊಡ್ಡ ಕ್ರ್ಯಾಕ್ ಮೂಡಿದೆ. ಒಂದು ಮಳೆ ಬಂದರೆ ರಸ್ತೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಟ್ರಾಫಿಕ್ ಪೊಲೀಸರು ಈ ಮೇಲ್ಸೆತುವೆ ಬಳಿ ಈ ಬ್ರಿಡ್ಜ್ ಬಿರುಕು ಬಿಟ್ಟಿದ್ದು ಭಾರೀ ವಾಹನಗಳು, 4 ಚಕ್ರದ ವಾಹನಗಳು ಹೋಗುವಂತಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಆದರೂ ವಾಹನಸವಾರರು ಇದನ್ನು ಗಮನಿಸದೇ ಸಾಗುತ್ತಿದ್ದಾರೆ.
ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಬೋರ್ಡ್ ಹಾಕುವ ಬದಲು ರಿಪೇರಿ ಮಾಡಬೇಕು. ಒಂದು ಮಳೆ ಬಂದರೆ ಎತ್ತರದಲ್ಲಿರುವ ಈ ರಸ್ತೆ ಕುಸಿಯುತ್ತದೆ ಎಂದು ಆತಂಕ ತೋಡಿಕೊಂಡಿದ್ದಾರೆ.