ನವದೆಹಲಿ: ರಾಮಮಂದಿರ ಲೋಕಾರ್ಪಣೆ (Ram Mandir Inauguration) ಕಾರ್ಯಕ್ರಮವನ್ನು ಬಹಿಷ್ಕರಿಸಲು ಸಿಪಿಐ-ಎಂ (CPI-M) ತೀರ್ಮಾನಿಸಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (Sitaram Yechury) ಪ್ರತಿಕ್ರಿಯಿಸಿ, ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡುವ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರತಿಪಾದಿಸಿ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಬಹುದು. ಆದರೆ ಉದ್ಘಾಟನಾ ಸಮಾರಂಭ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಸಂವಿಧಾನ (Constitution) ಮತ್ತು ಸುಪ್ರೀಂ ಕೋರ್ಟ್‌ಗೆ (Supreme Court) ಸಂಬಂಧಿಸಿದಂತೆ, ರಾಜ್ಯ ಈ ರೀತಿಯ ಕಾರ್ಯಕ್ರಮ ಮಾಡಬಾರದು. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್ ಲಿಸ್ಟ್
ಬಿಜೆಪಿ (BJP) ಧಾರ್ಮಿಕ ರಾಜಕೀಯದಲ್ಲಿ ತೊಡಗಿದೆ. ಇದು ಸರಿಯಲ್ಲ. ಅದಕ್ಕೆ ನಾವು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯೆ, ಬೃಂದಾ ಕಾರಟ್ (Brinda Karat) ಸ್ಪಷ್ಟಪಡಿಸಿದ್ದಾರೆ.