ಮಂಡ್ಯ: ಮಾಜಿ ಎಂಎಲ್‍ಎ ಪುತ್ರನಿಗೆ ಬೆಂಬಲ ನೀಡಿದ ಹಿನ್ನೆಲೆ ಸಿಪಿಐ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವ ಸುದ್ದಿ ಮಂಡ್ಯದ ಮಳವಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರನನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ. ಇದನ್ನೂ ಓದಿ: 31 ತಿಂಗಳ ಕಾಲ ಮುಚ್ಚಿದ್ದ ಕಾಶ್ಮೀರ ಶಾಲೆಗಳು ಮತ್ತೆ ಆರಂಭ!
ಆದ್ರೆ ಈ ಕುರಿತು ಅಧಿಕೃತ ಆದೇಶ ಪ್ರತಿ ನೀಡಲು ಎಸ್‍ಪಿ ನಿರಾಕರಿಸಿದ್ದಾರೆ. ರೈಸ್ ಪುಲ್ಲಿಂಗ್ ದಂಧೆಕೋರ ಸಲೀಂ ಹತ್ಯೆ ಆರೋಪದ ಮೇಲೆ ಕೆ.ಬಿ ಚಂದ್ರಶೇಖರ್ ಪುತ್ರ ಶ್ರೀಕಾಂತ್ ಜೈಲು ಸೇರಿದ್ದಾರೆ. ಈ ವಿಷಯದಲ್ಲಿ ಧನರಾಜು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಸ್ತುತ ಅವರನ್ನು ಕೆಲಸದಿಂದ ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ.