ರಾಮನಗರ: ಗೊಂಬೆನಗಿರಿ ಚನ್ನಪಟ್ಟಣದಲ್ಲಿ (Channapatna) ಚುನಾವಣಾ (Assembly Elections) ಕಾವು ರಂಗೇರುತ್ತಿದೆ. ಜಿದ್ದಾಜಿದ್ದಿಯ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ನಡುವೆ ಪೈಪೋಟಿ ಹೆಚ್ಚಾಗಿದೆ.
Advertisement
ಕ್ಷೇತ್ರದಾದ್ಯಂತ ಸಿಪಿ ಯೋಗೇಶ್ವರ್ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಮನೆ ಮನೆಗೆ ತೆರಳಿ ಸಿಪಿವೈ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಮತಯಾಚನೆ ಮಾಡಿದ ಸಿಪಿ ಯೋಗೇಶ್ವರ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಜೊತೆ ಕೂತು ಮಧ್ಯಾಹ್ನದ ಬಿಸಿಯೂಟ ಸವಿದಿದ್ದಾರೆ. ಮಕ್ಕಳ ಜೊತೆ ಕೂತು ಪ್ರಾರ್ಥನೆ ಮಾಡಿ ಊಟ ಮಾಡಿದ್ದಾರೆ.
Advertisement
Advertisement
ಶತಾಯಗತಾಯವಾಗಿ ಮಾಜಿ ಸಿಎಂ ಹೆಚ್‌ಡಿಕೆ ಅವರನ್ನು ಸೋಲಿಸಲು ಸಿಪಿವೈ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬರುವುದಿಲ್ಲ, ನಾನು ಇಲ್ಲಿಯೇ ಇದ್ದು ನಿಮ್ಮ ಕಷ್ಟಗಳನ್ನು ಆಲಿಸುತ್ತೇನೆ ಎಂದು ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ
Advertisement
ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಕೆರೆ ಅಭಿವೃದ್ಧಿ ಮಾಡಿದರೂ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಈ ಬಾರಿ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಎಂದು ಭಾವನಾತ್ಮಕವಾಗಿ ಮತದಾರರ ಓಲೈಕೆಗೆ ಸಿಪಿವೈ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಅಖಾಡಕ್ಕೆ ಸಿದ್ದು ಆಪ್ತ ಅಹಿಂದ ಟೀಂ ಎಂಟ್ರಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k