ರಾಮನಗರ: ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
Advertisement
ನಾಮಪತ್ರ ಸಲ್ಲಿಕೆಗೂ ಮುನ್ನ ಚನ್ನಪಟ್ಟಣದ ಬಸವನಗುಡಿ ಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಬೃಹತ್ ರೋಡ್ ಶೋ ನಡೆಸಿ ದೋಸ್ತಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಶಕ್ತಿಪ್ರದರ್ಶನ ಮಾಡಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ಶಾಸಕರಾದ ಹೆಚ್‌ಸಿ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಕದಲೂರ್ ಉದಯ್, ಕುಣಿಗಲ್ ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಪ್ರಮುಖ ನಾಯಕರು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಈ ರೋಡ್ ಶೋನಲ್ಲಿ ಸುಮಾರು 20,000 ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು
Advertisement
Advertisement
ಬೃಹತ್ ರೋಡ್ ಶೋ ಬಳಿಕ ಚುನಾವಣಾಧಿಕಾರಿ ಬಿನೋಯ್ ಅವರಿಗೆ ಸಿಪಿ ಯೋಗೇಶ್ವರ್ 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದೇನೆ. ಸಿಎಂ, ಡಿಸಿಎಂ ಕಾಂಗ್ರೆಸ್ ಶಾಸಕರ ಜೊತೆಗೂಡಿ ಸಲ್ಲಿಕೆ ಮಾಡಿದ್ದೇನೆ. ನನಗೆ ಆತ್ಮವಿಶ್ವಾಸ ಇದೆ, ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ರಾಷ್ಟ್ರೀಯ ಪಕ್ಷದ ಚಿಹ್ನೆಯಡಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಮೆಡಿಕಲ್ ರಿರ್ಪೋಟ್‌ನಲ್ಲಿ ದರ್ಶನ್‌ಗೆ L5 S1ನಲ್ಲಿ ಸಮಸ್ಯೆ ಇರುವುದು ದೃಢ- ನಾಳೆ ಜೈಲಿಗೆ ಪತ್ನಿ ಭೇಟಿ
Advertisement
ನಾನು ಎರಡು ಬಾರಿ ಸೋತಿದ್ದೇನೆ. ಅಭಿವೃದ್ಧಿ ಮಾಡಿದರೂ ತಾಂತ್ರಿಕ ಕಾರಣಗಳಿಂದ ಸೋತಿದ್ದೆ ಅಷ್ಟೇ. ನನ್ನನ್ನು ಪಕ್ಷಾಂತರಿ ಅಂತೀರಾ ಇದು ಬಹಳ ನೋವಾಗುತ್ತೆ. ನನಗೆ ಟಿಕೆಟ್ ಸಿಗಲ್ಲ ಎಂದು ಲೋಕಸಭಾ ಚುನಾವಣೆಯ ಬಳಿಕ ಕುಮಾರಸ್ವಾಮಿ ನಡವಳಿಕೆಯಿಂದ ಗೊತ್ತಾಯಿತು. ಕೊನೆಯ ತಂತ್ರಗಾರಿಕೆಯಂತೆ ಭಾವನಾತ್ಮಕವಾಗಿ ಚುನಾವಣೆ ಮಾಡೋಕೆ ಹೊರಟಿದ್ದಾರೆ. ಅವರು ಅಂದುಕೊಂಡಂತೆ ಅವರ ಮಗನನ್ನೇ ಸ್ಪರ್ಧೆ ಮಾಡಿಸುತ್ತಿದ್ದಾರೆ. ಮೊದಲಿಂದಲೂ ಅವರಿಗೆ ಮಗನನ್ನೇ ನಿಲ್ಲಿಸಬೇಕು ಅಂತಾ ಇತ್ತು. ಅದೇ ರೀತಿ ಇವಾಗ ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧೆ ಮಾಡಿಸುತ್ತಿದ್ದಾರೆ. ಭಾವನಾತ್ಮಕ, ಕಣ್ಣೀರು ಹಾಕಿ ಮಗನನ್ನು ಗೆಲ್ಲಿಸೋಕೆ ತಂತ್ರ ಮಾಡಿದ್ದಾರೆ. ನಾನು ಅವರ ಬಗ್ಗೆ ಜಾಸ್ತಿ ಮಾತಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್ ಟ್ರುಡೋ ರಾಜೀನಾಮೆ?