ರಾಮನಗರ: ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗಿಬಿಟ್ಟೆ ಎಂದು ಕುರುಕ್ಷೇತ್ರದ ಕಥೆಯಲ್ಲಿ ಬಭ್ರುವಾಹನ ಹೇಳುತ್ತಾನಲ್ಲ. ಇವತ್ತು ಕುಮಾರಸ್ವಾಮಿಯದ್ದು (HD Kumaraswamy) ಕೂಡ ಅದೇ ಪರಿಸ್ಥಿತಿ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ ಎಂದು ಚನ್ನಪಟ್ಟಣ ನೂತನ ಶಾಸಕ ಸಿಪಿ ಯೋಗೇಶ್ವರ್ (CP Yogeshwar) ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ (JDS) ಅವರು ಸೋತು ಸುಣ್ಣ ಆಗಿದ್ದಾರೆ. ಕುಮಾರಸ್ವಾಮಿ ಬಂಡತನ, ಅವರಿಗೆ ಇದ್ರೆ ಈ ಊರು, ಬಿಟ್ಟರೆ ಇನ್ನೊಂದು ಊರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಾಡಿರುವ ಅದ್ವಾನ ಸರಿಪಡಿಸಬೇಕು. ಕುಮಾರಸ್ವಾಮಿ ಏನು ಆಸಕ್ತಿ, ಕ್ರಮ ಕೈಗೊಂಡಿಲ್ಲ. ಚನ್ನಪಟ್ಟಣ ನಗರ ಸ್ವಚ್ಛ ಮಾಡುವ ಉದ್ದೇಶದಿಂದ ಎಲ್ಲಾ ನಗರಸಭಾ ಸದಸ್ಯರ ಸಭೆ ಕರೆದಿದ್ದೇನೆ. ಚನ್ನಪಟ್ಟಣ ನಗರ ಬಹಳ ದುಸ್ಥಿತಿ ಇದೆ. ಬಸ್‌ಸ್ಟ್ಯಾಂಡ್, ಕಸ, ಯುಜಿಡಿ ಸಮಸ್ಯೆ ಇದೆ. ಇವೆಲ್ಲವನ್ನೂ ಮೊದಲು ಬಗೆಹರಿಸಬೇಕು. ಇಂದು ಸಭೆ ನಡೆಸಿ ನಿರಂತರವಾಗಿ ತಾಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು. ಇದನ್ನೂ ಓದಿ: ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ: ಅನಿತಾ ಕುಮಾರಸ್ವಾಮಿ
Advertisement
Advertisement
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿ, ದೇವೇಗೌಡರ ನಾಯಕತ್ವ, ದೇವೇಗೌಡರು ಹುಟ್ಟುಹಾಕಿದ ಪಕ್ಷ ಅದು. ದೇವೇಗೌಡರಿಗೆ ವಯೋಸಹಜ ಇರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ಪರ್ಯಾಯವಾದ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಅದೇ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಇದನ್ನೂ ಓದಿ: ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ
Advertisement
ಇಡೀ ಕುಟುಂಬವೇ ಹೋರಾಟ ಮಾಡಿದರೂ ಚನ್ನಪಟ್ಟಣ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸು ಮಾಡಿದರೆ ಅವರಿಗೆ ಬೇರೆ ಅವಕಾಶ ತಪ್ಪಿದರೆ ನೋಡಬಹುದು. ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದರು. ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯವಾಗಿ ನಾಯಕತ್ವ ಹುಡುಕುತ್ತಿದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೋಣ. ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಅಂತಾ ಸಮುದಾಯ ತೀರ್ಮಾನ ಮಾಡಿದೆ.ಈ ಚುನಾವಣೆ ಫಲಿತಾಂಶದಿಂದಲೇ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರುವ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅವಕಾಶ ಸಿಕ್ಕಿದರೆ ನೋಡೊಣ ಎಂದು ನುಡಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ
Advertisement
ಯೋಗೆಶ್ವರ್ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡುತ್ತೇನೆ ಎಂದಿದ್ದೇನೆ? ಬಿಜೆಪಿ ಪಕ್ಷದಿಂದ ಆಚೆ ತಳ್ಳಲ್ಪಟ್ಟವನು ನಾನು. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾನು ಏನು ಅಲ್ಲಿಂದ, ಇಲ್ಲಿಂದ ಹಾರೋನು ಅಲ್ಲ. ಅನಿವಾರ್ಯ, ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿದೆ. ನಾನು ಕೊನೆ ದಿನದವರೆಗೂ ಕಾದು ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು. ನಾನು ಪಕ್ಕಾ ಕಾಂಗ್ರೆಸ್ಸಿಗ, ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿಎಂ ಬೇರೆ ಸಮುದಾಯಗಳಿಗೆ ಸ್ಪಂದನೆ ನೀಡುತ್ತಿದ್ದಾರೆ, ನಮ್ಮ ಸಮುದಾಯಕ್ಕೆ ಸ್ಪಂದನೆ ಇಲ್ಲ- ಜಯಮೃತ್ಯುಂಜಯ ಸ್ವಾಮೀಜಿ