ರಾಮನಗರ: ತಮಿಳುನಾಡು (Tamilnadu) ಸಿಎಂ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ವ್ಯಾಪಾರ ಸಂಬಂಧ ಇದೆ. ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಸರಿಯಾಗಿ ನಿಭಾಯಿಸುತ್ತಿಲ್ಲ. ಕಾವೇರಿ ಕೊಳ್ಳದ ಜನರ ಬಗ್ಗೆ ಅವರಿಗೆ ಅರಿವಿಲ್ಲ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಮ್ಮ ನೀರು ಹರಿದುಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ನಾಳೆ ಅವರನ್ನು ಪ್ರಶ್ನೆ ಕೇಳಿದ್ರೆ ಹೌದಾ.. ಯೋಗೇಶ್ವರ್ ಹೇಳಿದ್ನಾ ಅಂತ ಉಡಾಫೆಯಾಗಿ ಮಾತಾಡ್ತಾರೆ. ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ. ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ. ರಾಜಕೀಯವಾಗಿ ಡಿಕೆಶಿ-ಸ್ಟಾಲಿನ್ ಪಾಟ್ನರ್ಸ್ ಅದಕ್ಕಾಗಿ ಕರ್ನಾಟಕ, ಮಂಡ್ಯ, ರಾಮನಗರ ಜನರ ಹಿತ ಅವರಿಗೆ ಬೇಕಿಲ್ಲ ಎಂದರು. ಇದನ್ನೂ ಓದಿ: ಸೆ.18-22 ವಿಶೇಷ ಸಂಸತ್ ಅಧಿವೇಶನ- ಪ್ರಮುಖ 9 ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹ
ಹಳೇ ಮೈಸೂರು ಭಾಗದಲ್ಲಿ ಇರೋದು ಒಂದೇ ಡ್ಯಾಂ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತೆ. ಸಮಸ್ಯೆ ಬಂದಾಗ ಮೇಕೆದಾಟು ಯೋಜನೆ ಅಂತ ಡ್ರಾಮಾ ಮಾಡ್ತಾರೆ. ಡಿ.ಕೆ ಶಿವಕುಮಾರ್ ರಿಂದ ಈ ರಾಜ್ಯದ ಜನ ಏನೂ ನಿರೀಕ್ಷೆ ಮಾಡುವ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]