ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಪಟ್ಟಣದ ಕಟಾಪೆ ಪ್ಲಾಟ್‍ನಲ್ಲಿ ಗೋಹತ್ಯೆ ನಡೆದಿರೋದು ಬೆಳಕಿಗೆ ನಡೆದಿದೆ.
ಬೇಪಾರಿ ಜನಾಂಗದವರು ಅಕ್ರಮ ಕಸಾಯಿಖಾನೆ ತೆರೆದು ಗೋಹತ್ಯೆ ಮಾಡಿದ್ದಾರೆಂದು ಆರೋಪಗಳು ಕೇಳಿಬಂದಿವೆ. ಕಸಾಯಿಖಾನೆಯಲ್ಲಿ ಈಗಾಗಲೇ ಐದು ಗೋವು ಹಾಗು ಒಂದು ಎಮ್ಮೆ ಕೊಲ್ಲಲ್ಪಟ್ಟಿವೆ. ಕಸಾಯಿಖಾನೆಯಲ್ಲಿದ್ದ 19 ಆಕಳುಗಳನ್ನು ರಕ್ಷಣೆ ಮಾಡಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಜಮಖಂಡಿ ಕಮಿಷನರ್ ಜೆ.ಎಚ್.ಕಾಸೆ, ಸಿಪಿಐ ಸುನಿಲ್ ಕುಮಾರ್ ನಂದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿದ್ದಂತೆ ಗೋವುಗಳ ಹತ್ಯೆ ಮಾಡಿದ್ದಾರೆ ಎನ್ನಲಾದ ಬೇಪಾರಿ ಜನಾಂಗದವರು ಪರಾರಿಯಾಗಿದ್ದಾರೆ.