ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamarajpet) ಹಸುವಿನ (Cow) ಕೆಚ್ಚಲು ಕೊಯ್ದಿದ್ದ ಪ್ರಕರಣಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸಂಸದ ಪಿ.ಸಿ ಮೋಹನ್ (P.C Mohan) ಅವರು ಹಸುವಿನ ಮಾಲೀಕನಿಗೆ 2 ಹಸು ಹಾಗೂ ಒಂದು ಕರುವನ್ನು ನೀಡಿದ್ದಾರೆ.
ಹಸು ಮಾಲೀಕ ಕರ್ಣನಿಗೆ ಸಾಂತ್ವನ ಮಾಡಿದ ಸಂಸದರು. ನಾನು ವೈಯಕ್ತಿಕವಾಗಿ ಹಸುವನ್ನು ನೀಡಿದ್ದೇನೆ ಎಂದಿದ್ದಾರೆ.
- Advertisement -
- Advertisement -
ವಾದ್ಯಮೇಳಗಳ ಮೂಲಕ ಹಸು ಹಾಗೂ ಕರುವನ್ನು ಕರ್ಣ ಅವರ ಮನೆಗೆ ತಲುಪಿಸಿದ್ದಾರೆ. ಹಸು ನೀಡುವ ಮುನ್ನ, ಹಸು ಹಾಗೂ ಕರುವಿಗೆ ಚಾಮರಾಜಪೇಟೆಯ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿಸಲಾಯಿತು. ಬಳಿಕ ಹಸುವನ್ನು ಕರ್ಣ ಅವರ ಸುಪರ್ದಿಗೆ ನೀಡಲಾಗಿದೆ.
- Advertisement -
- Advertisement -
ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದ್ದರು.