– ನಾಳೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamrajpet) ಹಸುವಿನ ಕೆಚ್ಚಲು (Cow’s Udder) ಕೊಯ್ದ ಘಟನೆಯಿಂದ ಹಿಂದೂಗಳ ಆಕ್ರೋಶದ ಕಟ್ಟೆ ಒಡೆದಿದೆ. ಒಂದೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದರೆ ಮತ್ತೊಂದೆಡೆ ಬಿಜೆಪಿ (BJP) ನಾಯಕರು ಹೇಯ್ಯ ಕೃತ್ಯ ನಡೆದ ಸ್ಥಳದಲ್ಲಿ ಸಂಕ್ರಾಂತಿ (Sankranti) ಆಚರಿಸಲು ನಿರ್ಧರಿಸಿವೆ.
ಘಟನೆಯನ್ನು ಖಂಡಿಸಿ ನಾಳೆ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಚಾಮರಾಜಪೇಟೆಯ ಮೈಸೂರು ಬ್ಯಾಂಕ್ ಸರ್ಕಲ್, ಚಾಮರಾಜಪೇಟೆ ಅಂಗಡಿ ಬೀದಿ, ಸಿದ್ದಾಶ್ರಮ ಟ್ರಸ್ಟ್ ಈ ಮೂರು ಸ್ಥಳಗಳಲ್ಲಿ ಪೋಲಿಸ್ ಇಲಾಖೆ ಅನುಮತಿ ಕೊಟ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಯಲಿದೆ. ಜೊತೆಗೆ ಹಿಂದೂ ಜಾಗರಣಾ ವೇದಿಕೆಯಿಂದ ರಾಜ್ಯಾದ್ಯಂತ ಭಾನುವಾರದವರೆಗೆ ಪ್ರತಿಭಟನೆಗೆ ಕರೆ ಕೊಟ್ಟಿದೆ. ಈ ಪ್ರತಿಭಟನೆಯಲ್ಲಿ ವಿಎಚ್‌ಪಿ, ಭಜರಂಗದಳ, ಚಾಮರಾಜಪೇಟೆ ನಾಗರೀಕರ ಒಕ್ಕೂಟ, ಸೇರಿದಂತೆ ಸುಮಾರು 15-20 ಸಂಘಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಇದನ್ನೂ ಓದಿ: ಕಾಲುವೆಗೆ 4 ಮಕ್ಕಳು, ಹೆಂಡತಿಯನ್ನು ತಳ್ಳಿದ ಕೇಸ್‌ಗೆ ಟ್ವಿಸ್ಟ್ – ಪತಿಯ ಬಣ್ಣ ಬಯಲು ಮಾಡಿದ ಪತ್ನಿ
ಸೋಮವಾರ ಸಂಜೆ ಸಂಸದ ಪಿ.ಸಿ ಮೋಹನ್ ಹಸುವಿನ ಮಾಲೀಕ ಕರ್ಣನ ಮನೆಗೆ ವಾದ್ಯ ಮೇಳಗಳೊಂದಿಗೆ ಹೋಗಿ ಎರಡು ಹಸು ಹಾಗೂ ಒಂದು ಕರುವನ್ನು ನೀಡಿ ಸಾಂತ್ವನ ಹೇಳಿದರು. ಇನ್ನೂ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಸು ಮಾಲೀಕನ ಮನೆಗೆ ಭೇಟಿ ನೀಡಲಿದ್ದು, ಚಾಮರಾಜಪೇಟೆಯಲ್ಲಿ ಸಂಕ್ರಾಂತಿ ಆಚರಿಸಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?
ಇನ್ನೂ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಕೆಜಿ ಕನ್ನಡ ಪ್ರಕಾಶ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಘಟನೆ ನಡೆದ ಸ್ಥಳದಲ್ಲಿ ವಿಶೇಷ ಸಂಕ್ರಾತಿ ಆಚರಿಸಲು ನಿರ್ಧರಿಸಿವೆ. ಇದನ್ನೂ ಓದಿ: ಕಾಫಿನಾಡಿನಲ್ಲಿ ವರ್ಷದ ಮೊದಲ ಮಳೆ