ಹಸುವಿನ ಕೆಚ್ಚಲು ಕೊಯ್ದ ಘಟನೆಗೆ ಖಂಡಿಸಿದ ‘ಬಿಗ್ ಬಾಸ್’ ಸ್ಪರ್ಧಿ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ‘ಬಿಗ್ ಬಾಸ್’ (Bigg Boss Kannada 11) ಚೈತ್ರಾ ಕುಂದಾಪುರ (Chaithra Kundapura) ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಜೀವನಪೂರ್ತಿ ಹಾಲನ್ನು ಕೊಟ್ಟು ಸಾಕುವ ಗೋವಿನ ಕೆಚ್ಚಲು ಕೊಯ್ಯುವ ವಿಕೃತಿ ಮರೆಯುತ್ತಾರೆ ಅಂದರೆ ನಾಳೆ ಅವರು ಮನುಷ್ಯರ ಮೇಲೆಯೂ ಮರೆಯಬಹುದು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಚೈತ್ರಾ ಗರಂ ಆಗಿದ್ದಾರೆ.
ಹಸುವಿನ ಕೆಚ್ಚಲು ಕೊಯ್ದ ಘಟನೆ ಬಗ್ಗೆ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ ಖಂಡಿಸಿದ್ದಾರೆ. ಇದನ್ನು ನಾನು ಭಾರೀ ಕಠಿಣವಾದ ಶಬ್ಧಗಳಿಂದ ಖಂಡಿಸುತ್ತೇನೆ. ಗೋವು ಅಂದರೆ ದೇವಸ್ಥಾನ ಇದ್ದ ಹಾಗೆ. ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಅಂತ ನಾನು ನಂಬುತ್ತೇನೆ. ಗೋವು ಧಾರ್ಮಿಕ ಭಾವನೆ ಜೊತೆ ಒಂದು ಕುಟುಂಬದ ಆರ್ಥಿಕ ಆಧಾರ ಸ್ತಂಭ ಕೂಡ ಆಗಿತ್ತು. ಆ ಗೋವುಗಳ ಕೆಚ್ಚಲನ್ನು ಕೊಯ್ಯುತ್ತಾರೆ ಅಂದರೆ ಅದು ವಿಕೃತಿ ಎಂದು ಚೈತ್ರಾ ಮಾತನಾಡಿದ್ದಾರೆ.
ಕುಡಿದ ಮತ್ತಿನಲ್ಲಿ ಮಾಡಿದ್ದಾರೆ ಎಂದೆಲ್ಲಾ ತೆಪೆ ಹಚ್ಚುವ ಕೆಲಸ ನಡೆಯುತ್ತಿದೆ. ಖಂಡಿತವಾಗಿಯೂ ಅದರ ಉದ್ದೇಶ ಹಾಗೇ ಆಗಿರೋದಕ್ಕೆ ಸಾಧ್ಯವಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಈ ಘಟನೆ ಜರುಗಿದೆ ಎಂದಿದ್ದಾರೆ. ಆ ಗೋವು ಮಾಲೀಕರ ಆರ್ಥಿಕ ಸಂಕಷ್ಟ ಮತ್ತು ಅವರ ಭಾವನ್ಮಾಕ ಬಾಂಧವ್ಯಕ್ಕೆ ಸಾಥ್ ನೀಡಬೇಕು. ನಾವು ಕೂಡ ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿರೋದರಿಂದ ಗೋವುಗಳ ಜೊತೆಗಿನ ಭಾವನಾತ್ಮಕ ಬಾಂಧವ್ಯದ ಬಗ್ಗೆ ನನಗೆ ಗೊತ್ತು. ಈ ಘಟನೆ ಬಗ್ಗೆ ಪ್ರಾಣಿ ದಯ ಸಂಘದವರು ಇದನ್ನು ಖಂಡಿಸಬೇಕು.
ಗೋವು ನಮಗೆ ಪ್ರತಿನಿತ್ಯ ಹಾಲು ಕೊಡುವ ತಾಯಿ ಅವಳು. ಒಬ್ಬ ತಾಯಿಯ ಎದೆಹಾಲನ್ನು ನಾವು 3 ವರ್ಷ ಕುಡಿಯುತ್ತೇವೆ. ಅದರ ನಂತರ ಜನ್ಮ ಪೂರ್ತಿ ಗೋವಿನ ಹಾಲನ್ನೇ ಕುಡಿಯುತ್ತೇವೆ. ನಮಗೆ ಜೀವನಪೂರ್ತಿ ಹಾಲನ್ನು ಕೊಟ್ಟು ಸಾಕುವ ಗೋವನ್ನು ಕೆಚ್ಚಲು ಕೊಯ್ಯುವ ವಿಕೃತಿ ಮರೆಯುತ್ತಾರೆ ಅಂದರೆ ನಾಳೆ ಅವರು ಮನುಷ್ಯರ ಮೇಲೆಯೂ ಮರೆಯಬಹುದು. ಹಾಗಾಗಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಚೈತ್ರಾ ಮಾತನಾಡಿದ್ದಾರೆ.
ಇನ್ನೂ ‘ಬಿಗ್ ಬಾಸ್ ಕನ್ನಡ 11’ರ (BBK 11) ಸ್ಪರ್ಧಿಯಾಗಿರೋ ಚೈತ್ರಾ ಅವರು ಫಿನಾಲೆ ತಲುಪಲು ಇನ್ನೇನು 2 ವಾರಗಳು ಇರಬೇಕಾದ್ರೆ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ.