ಉಡುಪಿ: ಜಿಲ್ಲೆಯಾದ್ಯಂತ ಗೋವು ಕಳ್ಳತನ ವಿಪರೀತವಾಗಿ ಹೆಚ್ಚಿದೆ. ದುಷ್ಕರ್ಮಿಗಳು ತಲವಾರುಗಳನ್ನು ಜಳಪಿಸಿ ಹಟ್ಟಿಗೆ ನುಗ್ಗಿ ಹಸುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಾನೂನು-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸರಿಗೆ ದನಕಳ್ಳರು ತಲೆನೋವಾಗಿ ಪರಿಣಮಿಸಿದ್ದಾರೆ.
Advertisement
ರಾಜ್ಯದಲ್ಲಿ ಕಳೆದ ಜನವರಿ ತಿಂಗಳಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಿತ್ತು. ಕಾನೂನು ಜಾರಿಯಾದ ನಂತರ ಕಸಾಯಿಖಾನೆಗಳಿಗೆ ಬೀಗ ಬಿದ್ದಿದೆ. ಹಸುವಿನ ಮಾಂಸ ಕಸಾಯಿಖಾನೆಯಲ್ಲಿ ಸಿಗದ ಕಾರಣ ಗೋಮಾಂಸ ಪ್ರಿಯರು ದನ ಕದಿಯುವ ಚಾಳಿಯನ್ನು ಶುರುಮಾಡಿದ್ದಾರೆ. ಬಿಡಾಡಿ ದನಗಳನ್ನು ಕಟ್ಟಿ ಹಾಕಿ ವಾಹನಗಳಲ್ಲಿ ತುಂಬಿ ಪರಾರಿಯಾಗುತ್ತಿದ್ದಾರೆ. ನಿರ್ಜನ ಪ್ರದೇಶದ ಕಾಡುಗಳಲ್ಲಿ ಹಸುವಿನ ಹತ್ಯೆ ಮಾಡಿ ಮಾಂಸ ಮಾಡುವ ಘಟನೆಗಳು ಉಡುಪಿಯಲ್ಲಿ ನಡೆದಿದೆ. ಇದನ್ನೂ ಓದಿ: ಅಂಗನವಾಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್
Advertisement
Advertisement
ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರು ಕಾರ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಗೋವು ಕಳ್ಳತನ ಆಗುತ್ತಿದೆ. ಬಿಡಾಡಿ ದನಗಳನ್ನು ಕದ್ದು ಮುಗಿಸಿರುವ ದುಷ್ಕರ್ಮಿಗಳು ಇದೀಗ ಹಟ್ಟಿಗೆ ನುಗ್ಗಿ ಹಸುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಳೆದ ಭಾನುವಾರ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಎರಡು ಗೋವುಗಳನ್ನು ಮಾರುತಿ ಕಾರಿನಲ್ಲಿ ತುಂಬಿ ಕದಿಯಲು ಯತ್ನ ಮಾಡಿದ್ದರು. ಹಿಂದೂ ಜಾಗರಣ ವೇದಿಕೆ ಅಡ್ಡಗಟ್ಟಿ ಕಾರು ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಘಟನೆ ನಡೆದು ಮೂರು ದಿನವಾದರೂ ಹಸುಗಳನ್ನು ಕದ್ದ ಆರೋಪಿಗಳ ಬಂಧನವಾಗಿಲ್ಲ.
Advertisement
ಅಜೆಕಾರು ಪೊಲೀಸರಿಗೆ ದೂರು ನೀಡಿದ್ದ ಹಿಂದೂ ಜಾಗರಣ ವೇದಿಕೆ, ಠಾಣೆಯ ಅಂಗಳದಲ್ಲಿ ಪ್ರತಿಭಟನಾರ್ಥವಾಗಿ ‘ಅಹೋರಾತ್ರಿ ಭಜನೆ’ ಮಾಡುತ್ತಿದೆ. ಆರೋಪಿಗಳು ಬಂಧನವಾಗದಿದ್ದರೆ ನಿರಂತರ ಭಜನಾ ಸಪ್ತಾಹವನ್ನು ಪೊಲೀಸ್ ಠಾಣೆ ಮುಂದೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಠಾಣಾ ಎಸ್‍ಐ ಇನ್ಸ್ಪೆಕ್ಟರ್ ಮನವೊಲಿಸಿದರೂ ಜಾಗರಣ ವೇದಿಕೆ ನಿರಂತರವಾಗಿ ಭಜನೆ ಮುಂದುವರೆಸಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ
ಹೇಗೆ ಕಳ್ಳತನ ನಡೆಯುತ್ತೆ?
ಹಸುಗಳು ಇರುವ ಮನೆಗಳನ್ನು ಕಳ್ಳರಿಗೆ ಸ್ಥಳೀಯ ಯುವಕರು ಗೊತ್ತು ಮಾಡಿಕೊಡುತ್ತಾರೆ. ಗೋಕಳ್ಳರು ಅಲ್ಲಲ್ಲಿ ದಲ್ಲಾಳಿಗಳನ್ನು ನೇಮಕ ಮಾಡಿ, ಹಸುಗಳಿರುವ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡುತ್ತಾರೆ. ಯಾರು ಇಲ್ಲದ ಸಂದರ್ಭದಲ್ಲಿ ಹಟ್ಟಿ ಗಳಿಂದಲೇ ಗೋವುಗಳನ್ನು ಸಾಗಿಸುತ್ತಾರೆ. ಗೋ ಕಳ್ಳತನದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ಪ್ರತಿಭಟನೆಯ ರೀತಿಯೇ ಬೇರೆಯಾಗುತ್ತದೆ. ಇದಕ್ಕೆ ಆಸ್ಪದ ಕೊಡಬೇಡಿ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ