ಚಿಕ್ಕಮಗಳೂರು: ಮಾಂಸಕ್ಕಾಗಿ ಹಸುವನ್ನು ಕೊಂದ ದುರುಳರು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಕಾಡಿಗೆ ಎಸೆದು ಹೋಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಳೆಕಡುಬಗೆರೆ ಗ್ರಾಮದಲ್ಲಿ ನಡೆದಿದೆ.
Advertisement
ಮೇವಿಗೆ ಹೋಗಿದ್ದ ಹಳೆಕಡುಬಗೆರೆ ಗ್ರಾಮದ ರವೀಂದ್ರ ಎಂಬುವರಿಗೆ ಸೇರಿದ ಹಸು ಮನೆಗೆ ಬಂದಿರಲಿಲ್ಲ. ಗಬ್ಬದ ಹಸು ಮನೆಗೆ ಬಾರದ ಕಾರಣ ರವೀಂದ್ರ ಹಸುವನ್ನು ಹುಡುಕಿಕೊಂಡು ಹೋಗಿದ್ದರು. ಈ ವೇಳೆ, ಕಾಡಿನಲ್ಲಿ ಹಸುವಿನ ತಲೆ ಪತ್ತೆಯಾಗಿದೆ. ಮಾಂಸಕ್ಕಾಗಿ ಹಸುವನ್ನು ಕೊಂದ ಕಿಡಿಗೇಡಿಗಳು ಹಸುವಿನ ಹೊಟ್ಟೆಯಲ್ಲಿದ್ದ ಹಸುಗೂಸಿನಂತಹಾ ಕರುವನ್ನು ಕಾಡಿಗೆ ಎಸೆದು ಹೋಗಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಯಲ್ಲಿ ಬದುಕುಳಿದ 17ರ ಹುಡುಗಿ ದೆಹಲಿಗೆ ಏರ್‌ಲಿಫ್ಟ್
Advertisement
Advertisement
ಮೇಯುತ್ತಿದ್ದ ಹಸುವನ್ನು ಕದ್ದ ಗೋಕಳ್ಳರು ಎಲೇಕಲ್ ಕಾಡಿನ ಬಳಿ ತಂದು ಹಸುವಿನ ತಲೆಕಡಿದು, ಕರುವನ್ನು ಕಾಡಿಗೆ ಎಸೆದು ಮಾಂಸವನ್ನು ಬೇರೆಡೆ ಸಾಗಿಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ರವೀಂದ್ರ ಈ ಕೃತ್ಯವನ್ನು ಯಾರೇ ಮಾಡಿದ್ದರೂ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಬಾಳೆಹೊನ್ನೂರು ಪೊಲೀಸರು ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹಾ ಹೇಯ ಕೃತ್ಯ ಕೆಲಸಕ್ಕೆಂದು ಅಸ್ಸಾಮಿಗರು ಎಂದು ಹೇಳಿಕೊಂಡು ಬಂದಿರುವ ಅಕ್ರಮ ಬಾಂಗ್ಲಾ ನಿವಾಸಿಗಳದ್ದೇ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಅಕ್ರಮ ಬಾಂಗ್ಲಾ ನಿವಾಸಿಗಳಿಂದ ಆಗಾಗ್ಗೆ ಇಂತಹಾ ದುಷ್ಕಕೃತ್ಯಗಳು ನಡೆಯುತ್ತಲೇ ಇವೆ. ಹಾಗಾಗಿ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೂಡಲೇ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಕೆಲಸಕ್ಕೆಂದು ಅವರನ್ನು ಕರೆದುಕೊಂಡು ಬರುವ ದೊಡ್ಡ-ದೊಡ್ಡ ಎಸ್ಟೇಟ್ ಮಾಲೀಕರ ವಿರುದ್ಧವೂ ಸ್ಥಳಿಯರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥವಾಗಿದ್ದ ಯುವತಿ ನೇಣಿಗೆ ಶರಣು- ಕುಟುಂಬಸ್ಥರ ಆರೋಪವೇನು..?